ಸ್ಟೇಟಸ್ ಕತೆಗಳು (ಭಾಗ ೬೪೮) - ರಸ್ತೆ

ಸ್ಟೇಟಸ್ ಕತೆಗಳು (ಭಾಗ ೬೪೮) - ರಸ್ತೆ

ನೀನು ಮೊನ್ನೆಯಿಂದ ಕೇಳ್ತಾ ಇದ್ಯಲ್ಲ ಜೀವನ ಅನ್ನೋದು ಯಾವ ಕ್ಷಣಕ್ಕೆ ಹೇಗೆ ಬೇಕಾದರೂ ಬದಲಾಗಬಹುದು ಆದರೆ  ನನಗದು ಎಲ್ಲಿಯೂ ಕೂಡ ಕಾಣಿಸ್ತಾ ಇಲ್ಲ ಅರ್ಥ ಆಗ್ತಾ ಇಲ್ಲ ಅಂತ. ನಿನ್ನನ್ನ ಒಂದು ಸಲ ಬಿ.ಸಿ ರೋಡಿನಿಂದ ಉಪ್ಪಿನಂಗಡಿಯವರೆಗೆ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಆಗ ನಿನಗೆ ಜೀವನದ ಎಲ್ಲ ಪಾಠಗಳು ಒಂದೇ ಸಲ ಅರ್ಥವಾಗಿಬಿಡುತ್ತವೆ. ನೀನು ಅಂದುಕೊಂಡು ಕೊಂಡ ಹಾಗೆ ಯಾವುದೂ ಮುಂದೊಂದು ಕ್ಷಣದಲ್ಲಿ ಇರುವುದಿಲ್ಲ. ಚೆನ್ನಾಗಿರುವ ರಸ್ತೆಗಳಲ್ಲಿ ಕ್ಷಣದಲ್ಲಿ ಹೊಂಡಗಳು ಪ್ರತ್ಯಕ್ಷ ಆಗುತ್ತವೆ, ಒಣಗಿದ ನೆಲ ಕೆಸರಲ್ಲಿ ತುಂಬಿ ಹೋಗುತ್ತದೆ. ನೆನ್ನೆಯವರೆಗೂ ನೆಲವಿದ್ದದ್ದು ಇಂದು ಕಾಂಕ್ರೀಟ್ ಆಗಿರುತ್ತೆ, ರಸ್ತೆ ಬದಿಯಲ್ಲಿದ್ದ ಕಲ್ಲುಗಳು ರಸ್ತೆ ಮಧ್ಯಕ್ಕೆ ಬಂದು ನಿಂತಿರುತ್ತವೆ. ಅಲ್ಲಲ್ಲಿ ರಸ್ತೆ ವಿಭಾಜಕಗಳಾಗಿ ಹೊಸತೊಂದು ಜಾಗವನ್ನೇ ರಸ್ತೆಯನ್ನಾಗಿ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತೆ. ತಲುಪುವ ದಾರಿ ಗೊತ್ತಿದ್ರು ತಗಲುವ ಸಮಯ ಹೆಚ್ಚು ಕಡಿಮೆಯಾಗುತ್ತದೆ ನಿಯಮವನ್ನ ಮೀರಿ ವಾಹನಗಳು ಓಡಾಡುತ್ತವೆ ಸ್ವಚ್ಛತೆಯಿದ್ದದ್ದು ರಸ್ತೆ ಕೊನೆ ಗುರಿ ತಲುಪಿದಾಗ ಮಣ್ಣಿನಿಂದ ರಾಡಿಯಾಗಿ ಬಿಡುತ್ತೇವೆ. ಇಷ್ಟೆಲ್ಲಾ ಆ ಒಂದು ರಸ್ತೆಯನ್ನು ಚಲಿಸಿದರೆ ಸಾಕು ಎಲ್ಲಾ ಪಾಠಗಳು ದೊರಕಿ ಬಿಡುತ್ತವೆ ಇಂತಹ ಅದ್ಭುತ ಜೀವನ ಪಾಠ ಮತ್ತೆಲ್ಲಿ ಸಿಗುವುದಕ್ಕೆ ಸಾಧ್ಯ ಯಾವುದು ಕೂಡ ಅಂದುಕೊಂಡ ಹಾಗೆ ಇರುವುದಿಲ್ಲ ಪ್ರತಿಯೊಂದು ಬದಲಾಗುತ್ತದೆ ಪ್ರತಿಯೊಂದು ಸನ್ನಿವೇಶಗಳು ಕೂಡ. ಆ ಬದಲಾವಣೆಗೆ ಒಗ್ಗಿಕೊಂಡು ನಮ್ಮ ಗುರಿಯ ಕಡೆಗೆ ಸಾಗಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ