ಸ್ಟೇಟಸ್ ಕತೆಗಳು (ಭಾಗ ೬೫೦) - ಆತ ಸಿಗಬೇಕು
ನಾನು ನಡೆಯುವ ದಾರಿಯಲ್ಲಿ ಅಂಥವರೊಬ್ಬರು ಸಿಗಬೇಕು. ಅವರಿಗೆ ಯಾವ ಹೆಸರು ಇರಬಾರದು. ಯಾಕೆಂದರೆ ಹೆಸರಿಂದ ನಾನವರ ಗುರುತಿಸಬಹುದಲ್ವಾ? ಅವರ ದೇಹದಲ್ಲಿ ಯಾವುದೇ ರೀತಿಯ ಧರ್ಮ ಜಾತಿಯ ಸೂಚಕಗಳು ಕಂಡು ಬರಬಾರದು. ಅವರು ಧರಿಸುವ ಬಟ್ಟೆ ಅವರನ್ನ ಬಡವ ಶ್ರೀಮಂತ ಅಂತ ಭೇದಭಾವ ತೋರಿಸಬಾರದು, ಅವರ ದೇಹದಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಯಾವುದೇ ರೀತಿಯ ಒಡವೆ ವಸ್ತು ಸೌಂದರ್ಯವರ್ಧಕಗಳು ತುಂಬಿರಬಾರದು. ಅವರ ಪಾದಗಳು ಕಷ್ಟಗಳನ್ನು ಇನ್ನೂ ಅನುಭವಿಸಿ ಮೇಲೆದ್ದು ನಿಲ್ಲುತ್ತೇನೆ ಅನ್ನುವಂತ ದೃಢವಾದ ಹೆಜ್ಜೆಯನ್ನು ಊರಿದಂತಿರಬೇಕು, ಅವರ ಕೈಗಳು ಒಳಿತನ್ನು ಹಂಚಲು ಹಾತೊರೆಯುವಂತಿರಬೇಕು, ನಾಲಿಗೆಗಳು ಒಳಿತನ್ನ ಮಮತೆಯನ್ನ ಮಮಕಾರವನ್ನ ಹಂಚುವಂತಿರಬೇಕು, ಕಣ್ಣುಗಳಲ್ಲಿ ಭವಿಷ್ಯದ ಭದ್ರ ಕನಸುಗಳು ಬಿತ್ತುವಂತಿರಬೇಕು ,ನಾಲಗೆ ಶುಭನುಡಿದಿರಬೇಕು, ಕಿವಿಗಳು ಸತ್ಯ ಸುಳ್ಳುಗಳನ್ನ ವಿಭಾಗ ಮಾಡಿ ಎದೆಯೊಳಗೆ ಕಳುಹಿಸಲು ಕಾತುರದಿಂದ ಕಾಯುತ್ತಿರಬೇಕು, ಬರವಣಿಗೆಯ ಬಗ್ಗೆ ಒಂದಷ್ಟು ಆಸಕ್ತಿ ಹೊಂದಿ ಓದಿನ್ನು ಅಳವಡಿಸಿಕೊಂಡು ಸ್ವಂತದರ ಜೊತೆಗೆ ಸುತ್ತಮುತ್ತಲಿನವರನ್ನು ಸೇರಿಸಿ ಎಲ್ಲರ ಜೊತೆಯಾಗಿ ಬದುಕುವಂತಹ ಯೋಚನೆಯನ್ನು ಹೊಂದಿರುವ ಒಬ್ಬ ವ್ಯಕ್ತಿ ಕಣ್ಣೆದುರಿಗೆ ಸಿಗಬೇಕು .ಆತನು ನಾನೆಡೆಯುವ ದಾರಿಯಲಿ ನನ್ನ ಜೊತೆಗೆ ನಡೆದು ನನ್ನನ್ನು ಅವನಂತಾಗಿಸುವ ಪುಟ್ಟ ಪ್ರಯತ್ನಕ್ಕೆ ಸಹಕಾರ ನೀಡಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ