ಸ್ಟೇಟಸ್ ಕತೆಗಳು (ಭಾಗ ೬೬೯) - ಖಾಲಿ
ಒಳಗೆ ಏನಿದೆ ಅನ್ನೋದು ಹೊರಗೆ ನೋಡುವಾಗ ತಿಳಿಯುವುದಿಲ್ಲ. ಒಳಗೆ ಎಷ್ಟು ತುಂಬಿಕೊಂಡಿದೆ ಎಷ್ಟು ಖಾಲಿಯಾಗಿದೆ ಅನ್ನೋದು ಹೊರನೋಟಕ್ಕೆ ಅರ್ಥವಾಗುವುದಿಲ್ಲ. ಅವತ್ತು ತುಮಕೂರಿನಿಂದ ಶಿವಮೊಗ್ಗದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಅನಿವಾರ್ಯತೆ. ರೈಲಿಗೆ ಕಾಯುತ್ತಾ ನಿಂತಿದ್ದೆ. ಎಲ್ಲಾದರೂ ಒಂದು ಕಡೆ ಹತ್ತಿ ಕುಳಿತುಕೊಳ್ಳಬೇಕಿತ್ತು. ಆದರೆ ಪೂರ್ತಿ ಜನ ತುಂಬಿಕೊಂಡಿದ್ದಾರೆ. ಕುಳಿತುಕೊಳ್ಳುವುದಕ್ಕೂ ಸ್ಥಳವಿಲ್ಲ. ಹೇಗೂ ಒಳಗೆ ತೂರಿಕೊಂಡಾಗ ಪುಣ್ಯಕ್ಕೆ ಒಂದಷ್ಟು ಸೀಟುಗಳು ಖಾಲಿ ಇದ್ದವು. ಹಾಗೆಯೇ ಪಯಣ ಮುಂದುವರಿತಾ ಬಂತು. ಮುಂದಿನ ಒಂದು ನಿಲ್ದಾಣದಲ್ಲಿ ನಾನು ಕುಳಿತ ಭೋಗಿಯಲ್ಲಿ ಹಲವಾರು ಸೀಟುಗಳು ಖಾಲಿ ಇದ್ದರೂ ಕೂಡ ಜನ ಪಕ್ಕದ ಭೋಗಿಗಳಿಗೆ ಓಡ್ತಾ ಇದ್ದಾರೆ. ಕಾರಣ ಹೊರಗಿನವರಿಗೆ ಗೊತ್ತಿಲ್ಲ ಒಳಗೆ ಎಷ್ಟು ಖಾಲಿಯಾಗಿದೆ ಅಂತ. ಹಾಗಾಗಿ ಒಳಗಿನ ಖಾಲಿತನಗಳು ಒಳಗಿನವರಿಗೆ ಅರಿವಾಗುತ್ತೆ ಹೊರತು ಹೊರಗೆ ನಿಂತು ನೋಡಿದವರಿಗಲ್ಲ. ಹೊರಗೆ ನಿಂತಾಗ ಪೂರ್ತಿ ತುಂಬಿಕೊಂಡಂತೆ ಕಂಡ್ರು ಒಳಗೆ ಟೊಳ್ಳಾಗಿ ಇರಬಹುದು ಹಾಗಾಗಿ ಪರೀಕ್ಷಿಸಿ ನೋಡುವುದೇ ಒಳ್ಳೆಯದು. ಜೀವನ ಪಾಠ ರೈಲಿನ ಬಂಡಿಯ ಹಾಗೆ ಜೋಡಣೆಯಾಗಿ ಸಾಗುತ್ತಾ ಹೋಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ