ಸ್ಟೇಟಸ್ ಕತೆಗಳು (ಭಾಗ ೬೮೧) - ಸಮಸ್ಯೆ

ಸ್ಟೇಟಸ್ ಕತೆಗಳು (ಭಾಗ ೬೮೧) - ಸಮಸ್ಯೆ

ಆ ರಸ್ತೆಯಲ್ಲಿ ಒಂದು ಸಣ್ಣ ತಿರುವು. ಮಳೆಗಾಲ ಆದ್ದರಿಂದ ಒಂದೆರಡು ಹೊಂಡಗಳು ಉದ್ಭವವಾಗಿದೆ ಮತ್ತೆ ಮತ್ತೆ ಹೊಂಡ ಮುಚ್ಚುವುದಕ್ಕೆ ಇಲಾಖೆಗೆ ವಿಚಾರ ತಿಳಿಸಿದರೂ ಸಹ ಆ ಕಡೆಯಿಂದ ಉತ್ತರವೇ ಇಲ್ಲ. ಆ ರಸ್ತೆಯಲ್ಲಿ 80 ಕಿಲೋಮೀಟರ್ ವೇಗದಲ್ಲಿ ವಾಹನಗಳು ಚಲಿಸುತ್ತವೆ. ಹಾಗೆಯೇ ವೇಗವಾಗಿ ಚಲಿಸುವಾಗ ಆ ಹೊಂಡಕ್ಕೆ ಏನಾದರೂ ಚಕ್ರ ಬಿದ್ದರೆ ಗಾಡಿ ಪಲ್ಟಿ ಹೊಡೆಯುವುದು ಖಚಿತ. ಹಾಗೆ ಒಂದೆರಡು ಗಾಡಿಗಳು ಬಿದ್ದು ಜನರಿಗೆ ತೊಂದರೆ ಆದರೂ ಅದನ್ನು ಕೇಳುವವರಿಲ್ಲ. ಆದರೆ ಆ ದಿನ ಆ ಊರಿನ ಎಲ್ಲರಿಗೂ ತಿಳಿದಿರುವ ಒಬ್ಬರು ಆ ಹೊಂಡಕ್ಕೆ ಬಿದ್ದು ಗಾಯಾಯಿತು. ಅದು ಎಲ್ಲರಿಗೂ ತಿಳಿಯಿತು ಮರುದಿನವೇ ರಸ್ತೆ ಮುಚ್ಚುವ ಕೆಲಸ ಆರಂಭವಾಯಿತು. ರಸ್ತೆಯ ಗುಂಡಿಗಳಿಂದ ಕೆಲವೊಂದು ತೊಂದರೆಗಳಿವೆ, ಮುಂದೇನಾಗುತ್ತೆ ಅನ್ನೋದರ ಅರಿವು ಇರೋದಿಲ್ಲ. ಆ ಕಾರಣಕ್ಕೆ ಆ ಸಮಸ್ಯೆಗಳು ಸಣ್ಣದಿರುವಾಗಲೇ ಅದನ್ನ ನಿವಾರಿಸಿ ಬಿಡಬೇಕು ಇಲ್ಲವಾದರೆ ಮುಂದೆ ಅದು ಒಂದು ದೊಡ್ಡ ಸಮಸ್ಯೆಯಾಗಿ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ