ಸ್ಟೇಟಸ್ ಕತೆಗಳು (ಭಾಗ ೬೮೭) - ನಂಬಿಕೆ

ಸ್ಟೇಟಸ್ ಕತೆಗಳು (ಭಾಗ ೬೮೭) - ನಂಬಿಕೆ

ಅವನು ಮಗಳಿಗೆ ಹಾಡುವ ಅಭ್ಯಾಸ. ಎಲ್ಲಿ ಹಾಡು ಕೇಳಿದ್ರು ಸುಮ್ಮನೆ ಕಿವಿ ಆಗ್ತಾಳೆ. ಒಬ್ಬಳೇ ಕುಳಿತಾಗ ಅದನ್ನೇ ಹಾಡುವುದಕ್ಕೆ ಪ್ರಯತ್ನಪಡುತ್ತಾಳೆ. ಹಾಗೆ ಹಾಡ್ತಾ ಹಾಡ್ತಾ ಊರಲ್ಲಿ ಯಾವುದೇ ಕಾರ್ಯಕ್ರಮ ಇದ್ರೂ ಅವಳನ್ನ ಪ್ರೀತಿಯಿಂದ ಕರೆಯುತ್ತಿದ್ದರು. ಅವಳ ಹಾಡನ್ನು ಖುಷಿಯಿಂದ ಕೇಳುತ್ತಾನೋ ಇದ್ದರು. ಹಾಗೆ ದಿನಗಳು ಉರುಳಿದವು ಮನೆಯಲ್ಲಿರುವ ಸಣ್ಣ ಟಿವಿ ಒಳಗಡೆ ತುಂಬ ಜನ ಹಾಡೋದನ್ನ ನೋಡಿ ಇವಳಿಗೂ ತಾನು ಟಿವಿ ಒಳಗೆ ಹೋಗಿ ಹಾಡಬೇಕು ಅನ್ನೋದಾಸೆ. ಆದ್ರೆ ತುಂಬ ದೂರದವರು ಅಲ್ಲಿ ಹೋಗಿ ಬದುಕಬೇಕು ಹಾಡುವುದಕ್ಕೆ ಒಂದಷ್ಟು ದಿನ ಅಲ್ಲಿ ನಿಲ್ಲಬೇಕು ಮೊದಲು ತಾನು ಆಯ್ಕೆಯಾಗಬೇಕು ಅದಕ್ಕೋಸ್ಕರ ಅಪ್ಪನಲ್ಲಿ ಕನಸುಗಳನ್ನು ಹಂಚಿಕೊಂಡಳು. ಮಗಳ ಕನಸಿಗೆ ನೀರೆರೆದು ಪೋಷಿಸಬೇಕು ಅನ್ನೋ ಕಾರಣಕ್ಕೆ ತನ್ನ ಎರಡು ವರ್ಷದ ದುಡಿಮೆಯಲ್ಲಿ ಇಟ್ಟಿದ್ದ ಎಲ್ಲಾ ದುಡ್ಡನ್ನು ಒಂದಷ್ಟು ಸಾಲವನ್ನು ಸೇರಿಸಿ ಆ ಪಟ್ಟಣದ ಕಡೆಗೆ ತಂದೆ ಹೊರಟುಬಿಟ್ರು. ಮಗಳ ಜೊತೆಗೆ ಗುರುತು ಪರಿಚಯವಿಲ್ಲದ ಊರಲ್ಲಿ ಮಗಳ ಹಾಡಿಗೊಂದು ಪುಟ್ಟ ವೇದಿಕೆಯನ್ನು ಅರಸುತ್ತಾ ಹೊರಟರು. ಹಾಗೆ ಒಂದಷ್ಟು ಕಡೆ ಮೋಸಗಳಾದವು. ಇನ್ನೊಂದು ಕಡೆ ವೇದಿಕೆ ಸಿಕ್ಕು ಆದರೆ ಅದು ಯಾವುದು ಮಗಳನ್ನ ಟಿವಿಯ ಒಳಗೆ ಕಾಣುವ ಹಾಗೆ ಮಾಡ್ಲಿಲ್ಲ.ಯಾರದೋ ಒಬ್ಬರ ಪುಣ್ಯಾತ್ಮರ ಆಸೆಯಂತೆ ಆಕೆಗೆ ಅವಕಾಶ ಸಿಕ್ತು. ಹಾಡಿದಳು ಎಲ್ಲರಿಗೂ ಇಷ್ಟವಾಯಿತು ಒಂದಷ್ಟು ಹಂತಗಳನ್ನು ದಾಟಿದಳು. ಕೊನೆಗೆ ಅಲ್ಲಿಂದ ಮನೆ ಕಡೆ ಹೊರಡಬೇಕಾಯಿತು. ಈಗಾಗಲೇ ಕೆಲವಾರು ತಿಂಗಳುಗಳು ದಾಟಿದವು ಊರಿಗೆ ತಲುಪಿದಾಗ ಊರಲ್ಲಿ ಎಲ್ಲರಿಗೂ ಸಂಭ್ರಮ ಎಲ್ಲರೂ ಮಾತನಾಡುವರೇ ಮಗಳಿಗೂ ತಾನು ಒಂದಷ್ಟು ದೂರಗಳನ್ನು ದಾಟಿದ್ದೇನೆ ಅನ್ನುವ ಖುಷಿ ಸಿಕ್ಕಿತು. ತಂದೆಯ ಮುಂದೆ ಸಾಲ ತೀರಿಸುವ ಜವಾಬ್ದಾರಿಯು ಇತ್ತು ಅವಳ ಕನಸಿಗೆ ಆತ ಗಟ್ಟಿಯಾಗಿ ನಿಂತಿದ್ದ ಅವಳು ತನ್ನ ಓದನ್ನ ಗಟ್ಟಿಗೊಳಿಸುವುದಕ್ಕೆ ಪಾಠ ಪುಸ್ತಕವನ್ನು ತೆರೆದು ದೃಢತೆಯಿಂದ ಕೂತಿದ್ದಳು. ಇಬ್ಬರಿಗೂ ಮುಂದಿನ ಬದುಕಿನ ಬಗ್ಗೆ ದೃಢವಾದ ನಂಬಿಕೆ ಇತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ