ಸ್ಟೇಟಸ್ ಕತೆಗಳು (ಭಾಗ ೬೮) - ಸ್ಪರ್ಧೆ

ಸ್ಟೇಟಸ್ ಕತೆಗಳು (ಭಾಗ ೬೮) - ಸ್ಪರ್ಧೆ

ಇದು ನನ್ನ ನೇರ ಪ್ರಶ್ನೆ. ಕೆಲವರು ಮಾಡುತ್ತಿರುವುದು ಸರಿಯಾ? ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಒಪ್ಪಿಕೊಳ್ಳುತ್ತೇನೆ. ಅದ್ಯಾಕೆ ದೇವರನ್ನು ಸ್ಪರ್ಧೆಗೆ ಒಡ್ಡುತ್ತಿದ್ದೇವೆ? ಮುಗ್ಧತೆಯನ್ನು ಹೊತ್ತು ಓಡಾಡುತ್ತಿರುವ ಕಂದಮ್ಮಗಳ ನಡುವೆ ಸ್ಪರ್ಧೆಯನ್ನು ಯಾಕೆ ಸೃಷ್ಟಿಸಿದ್ದೇವೆ? ಪಿಳಿ ಪಿಳಿ ಬಿಡುವ ಕಣ್ಣುಗಳು, ನಿಷ್ಕಲ್ಮಶ ನಗು, ಮೃದುವಾದ ಕೆನ್ನೆಗಳು, ಕೋಮಲ ದೇಹ, ಅಂದವನ ಇಮ್ಮಡಿಗೊಳಿಸುವ ಮುಖ, ದೇವರೇ ಖುದ್ದಾಗಿ ಇಳಿದುಬಂದು ಮನೆಯೊಳಗೆ ಆಡುತ್ತಿರುವಂತಹ ಮಕ್ಕಳನ್ನು ಸ್ಪರ್ಧೆಯ ನಡುವೆ ಯಾಕೆ ತಂದು ಇಡುತ್ತಿದ್ದೇವೆ. " ಯಾವ ಮಗು ಅಂದ" ಈ ಯೋಚನೆಯೇ ತಪ್ಪು. ಹಾಡು-ನೃತ್ಯ ಬರವಣಿಗೆ ಏನಾದರೂ ಸ್ಪರ್ಧೆಗೆ ಒಪ್ಪಿಕೊಳ್ಳೋಣ. ಮುಗ್ಧತೆಯನ್ನು ಪ್ರಶಸ್ತಿಗೆ ಒಯ್ಯುವುದು ತಪ್ಪಲ್ವಾ? ಸಣ್ಣ ಮಕ್ಕಳಿಗೆ ವೇಷ ತೊಡಿಸಿ ಸಂಭ್ರಮ ಪಡೋಣ, ಅದನ್ನ ಸ್ಪರ್ಧೆಯಾಗಿಸುವುದು ಬೇಡ. ಇದರಿಂದ ಸಾಧಿಸಿದ್ದೇನು? ಪ್ರತಿಯೊಬ್ಬರಿಗೂ ಅವರ ಮಗು ಅಂದವೇ! ಬಾಲ್ಯವನ್ನ ಸ್ಪರ್ಧೆಯ ನಡುವೆ ಕಳೆಯುವುದು ಬೇಡ. "ನನ್ನ ಮಗು ನನಗಂದ" ಇದು ಎಲ್ಲರ ಯೋಚನೆ. ಈಗ ಸ್ಪರ್ಧೆಯ ಫೋಟೋಗಾಗಿ ತಯಾರಿ ಆರಂಭವಾಗುತ್ತದೆ. ತೀರ್ಪು ನೀಡುವವರು ಅದ್ಯಾವ ಮನಸ್ಥಿತಿಯಿಂದ ಕಾರ್ಯ ನಿರ್ವಹಿಸುತ್ತಾರೋ . ದೇವರನ್ನು ಪರೀಕ್ಷಿಸಿ ತೀರ್ಪು ನೀಡಲು ರೋಗಗ್ರಸ್ತ ಮನಸ್ಸುಗಳಾದ ನಮಗೆಲ್ಲಿದೆ ಅರ್ಹತೆ. ದೇವರು ದೇವರಾಗೇ ಇರಲಿ. ಮಕ್ಕಳು ಮಕ್ಕಳಾಗಿದ್ದರೆ ಅಂದ. ಮಕ್ಕಳ ಅಂದವನ್ನು ಸ್ಪರ್ಧೆಯ ನಡುವೆಯೂ ತಂದಿಡುವುದೇ ತಪ್ಪು ನೀವೇನಂತೀರಿ...

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

Comments

Submitted by JAYARAM NAVAGRAMA Sat, 11/27/2021 - 06:24

ಹಾಗಿದ್ದ ಮೇಲೆ ಸಾರ್ವಜನಿಕ ಕಾರ್ಯಕ್ರಮದಲ್ಲು ಎಲ್ಲಾ ಮಕ್ಕಳಿಗೆ ಯುನಿಫಾರಂ ಹಾಕಬೇಕಾಗುತ್ತದೆ..

ಕೆಲವು ಮದುವೆಗಳಲ್ಲಿ ಜಾತ್ರೆಯಲ್ಲಿ ನೋಡಿ. ಆ ಮಕ್ಕಳನ್ಬು ಹೆತ್ತವರು ಯಾವ ರೀತಿ ಅಲಂಕರಿಸಿಕೊಂಡು ಬರುತ್ತಾರೆ ಅಂತ..

ಅದೂ ಒಂತರ ಸ್ಪರ್ಧೆಯೆ ತಾನೆ?