ಸ್ಟೇಟಸ್ ಕತೆಗಳು (ಭಾಗ ೬೯೩) - ಚಾಲಕ

ಸ್ಟೇಟಸ್ ಕತೆಗಳು (ಭಾಗ ೬೯೩) - ಚಾಲಕ

ಅಲ್ಲೊಂದು ಸುಂದರವಾದ ಗಾಡಿ ಅದನ್ನ ನಿರ್ಮಿಸಿದವನು ತುಂಬಾ ಶ್ರಮಪಟ್ಟು ತುಂಬಾ ದೂರದವರೆಗೆ ಚಲಿಸಬೇಕು ಅನ್ನುವ ನಿಟ್ಟಿನಲ್ಲಿ ಅದನ್ನ ನಿರ್ಮಾಣ ಮಾಡಿದ್ದಾನೆ. ಎಲ್ಲಾ ಸಾಧ್ಯತೆಗಳನ್ನು ಆ ಗಾಡಿಯ ಜೊತೆ ಚಲಿಸುವವನಿಗೆ ಏನೆಲ್ಲ ಸಾಧ್ಯತೆಗಳು ಸಿಗಬೇಕು ಆ ಎಲ್ಲ ಸಾಧ್ಯತೆಗಳನ್ನು ಅದರೊಳಗೆ ತುಂಬಿಸಿ ಒಂದಷ್ಟು ದೂರದವರೆಗೆ ಆತನೇ ಚಲಾಯಿಸಿಕೊಂಡು ಬಂದಿದ್ದ . ಆದರೆ ತನ್ನಂತೆ ಇನ್ನೊಂದಷ್ಟು ಚಲಾಯಿಸುವವರನ್ನ ಜೊತೆಗೆ ಇಟ್ಟುಕೊಳ್ಳಬೇಕು ಅನ್ನೋ ನಿಟ್ಟಿನಲ್ಲಿ ನಂಬಿಕೆಯಿಂದ ಒಂದಷ್ಟು ಚಾಲಕರನ್ನ ತಯಾರಿಗೊಳಿಸಿದ. ಅವರು ಮೊದಲು ಆ ವಾಹನವನ್ನು ನಿದಾನದಿಂದಲೇ ಆರಂಭಿಸಿ ಹಾಗೆ ಚಲಾಯಿಸುತ್ತಿದ್ದವರಿಗೆ ಆ ಗಾಡಿ ತಮ್ಮದು ಎನ್ನುವ ಯೋಚನೆ ಎಲ್ಲಿಯೂ ಕೂಡ ಇರಲಿಲ್ಲ. ಈಗ ದಾರಿಯಲ್ಲಿ ಹೋಗುತ್ತಿರುವಾಗ ಏನಾದರೂ ಅವಘಡವಾದರೆ ಆಗ ಚಾಲಕನದ್ದೇ ತಪ್ಪಾಗುತ್ತದೆ ವಿನಃ ಗಾಡಿ ನಿರ್ಮಿಸಿದವನದ್ದಲ್ಲ. ಗಾಡಿಯನ್ನ ಚಲಾಯಿಸುತ್ತಿದ್ದವನಿಗೆ ಮುಂದಿನ ದಾರಿಯ ಬಗ್ಗೆ ಗೊತ್ತಿಲ್ಲ ಎಲ್ಲಿ ತಿರುಗಿಸಬೇಕು ಎಲ್ಲಿ ಏರು ತಗ್ಗುಗಳಿದ್ದಾವೆ ,ಎಲ್ಲಿ ನಿಧಾನಗೊಳಿಸಬೇಕು, ಎಲ್ಲಿ ವೇಗವಾಗಿ ಸಾಗಬೇಕು ಯಾವುದರ ಅರಿವಿಲ್ಲದೆ ಆತ ಅಡ್ಡಾದಿಡ್ಡಿ ಚಲನೆಯಿಂದ ತೊಂದರೆ ಮಾಡಿಕೊಂಡ.ಹಾಗಾಗಿ ಕೆಲವೊಂದು ವಾಹನಗಳನ್ನ ಚಲಾಯಿಸುವಾಗ ಅನುಭವದ ಅವಶ್ಯಕತೆಗಳು ಖಂಡಿತವಾಗಿಯೂ ಬೇಕು. ನನಗೆ ಚಲಾಯಿಸಲು ಕೊಡುವ ವಾಹನವನ್ನು ತುಂಬಾ ಜೋಪಾನ ಮಾಡಿಕೊಳ್ಳುವ ಯೋಚನೆ ಮತ್ತು ವಿವೇಚನೆ ನನ್ನನ್ನು. ಇದು ಗಾಡಿ ಆಗಬೇಕೆಂದೇನೂ ಇಲ್ವಲ್ಲ. ನಮ್ಮ ನಮ್ಮ ಬದುಕಿಗೆ ಒಪ್ಪಿತವಾಗುವ ಯಾವ ಮಾತಾದರೂ ಆಗಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ