ಸ್ಟೇಟಸ್ ಕತೆಗಳು (ಭಾಗ ೭೦೦) - ಬಾವುಟ

ಸ್ಟೇಟಸ್ ಕತೆಗಳು (ಭಾಗ ೭೦೦) - ಬಾವುಟ

ನಾಲ್ಕು ಚಕ್ರದ ಗಾಡಿಯೊಂದು ಹಾಗೆಯೇ ತಿರುಗಿ ಆ ವೃತ್ತಾಕಾರದ ಸರ್ಕಲ್ ನ ಬದಿಯಲ್ಲಿ ಬಂದು ನಿಂತಿತು. ಅದು ಆಗಾಗ ತನ್ನ ಕೆಲಸವನ್ನ ಮಾಡ್ತಾನೆ ಬರ್ತಾ ಇದೆ. ವಿಚಾರಗಳಿಗೆ ಸಂಬಂಧಪಟ್ಟ ಹೋರಾಟಗಳು ಪ್ರತಿಭಟನೆಗಳು ಜಾತ್ರೆ, ಉರುಸ್, ಚರ್ಚ್ ಗಳ ಹಬ್ಬಗಳಿಗೆ ಬಾವುಟಗಳನ್ನ ಜೋಡಿಸಿಟ್ಟಿದ್ದಾರೆ. ಹಬ್ಬಗಳಿಗೂ ತಮ್ಮನ್ನ ಎಲ್ಲಿ ಯಾವ ಕಾರಣಕ್ಕೆ ಯಾವ ವಿಷಯದಲ್ಲಿ ಬಳಸ್ತಾ ಇದ್ದಾರೆ ಅನ್ನೋದು ಗೊತ್ತಿಲ್ಲ. ತಮ್ಮನ್ನು ಬೀಸುವಾಗ ಗಾಳಿಗೆ ಮೈಯುಡ್ಡಿ ಹಾರಾಡುವುದು ಆಗ ಸುತ್ತಮುತ್ತ ತಮ್ಮ ಬಳಗದವರೆಲ್ಲ ಹಾರಾಡ್ತಾನೆ ಇರ್ತಾರೆ. ಒಂದಷ್ಟು ಹೊತ್ತು ಹಾರಾಡಿ ನಂತರ ಮುದ್ದೆಯಾಗಿ ಈ ಗಾಡಿಯನ್ನು ಸೇರುವುದು ಇವರನ್ನ ಹಾರಾಡಿಸುತ್ತಿದ್ದ ಕೈಗಳು ಬದಲಾಗುತ್ತಾ ಹೋಗುತ್ತವೆ. ಅನ್ನೋದು ಗೊತ್ತಿಲ್ಲ ಇಂದು ಕೂಡ ನಮ್ಮಲ್ಲಿ ಹೋದವರು ಕೆಲವರು ವಾಪಸ್ ಬರುತ್ತಾರೆ, ಕೆಲವರು ಬರೋದೇ ಇಲ್ಲ. ನಾವೆಲ್ಲರೂ ಒಂದೇ ನಮಗೆ ಬೇದ ಭಾವವಿಲ್ಲ. ಅಲ್ಲಿ ಹಿಡಿದಿರುವ ಕೈಗಳಲ್ಲಿ ಮನಸ್ಥಿತಿಗಳಲ್ಲಿ ಭೇದಭಾವ ಇದೆ ಅಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ