ಸ್ಟೇಟಸ್ ಕತೆಗಳು (ಭಾಗ ೭೦೨) - ಮೌನದ ಬದುಕು

ಸ್ಟೇಟಸ್ ಕತೆಗಳು (ಭಾಗ ೭೦೨) - ಮೌನದ ಬದುಕು

ಮೌನದ ಬದುಕಿನ ನಡುವೆ ಹಾಗೆಯೇ ಪಯಣ ಹೊರಟಿದ್ದೆ. ಅಲ್ಲಿ ಮಾತಿಗೆ ಅವಕಾಶವೇ ಇಲ್ಲ. ಅದನ್ನ ದೇವರೇ ನೀಡಲಿಲ್ಲ ಅಂತ ಅಂದುಕೊಳ್ಳುತ್ತೇನೆ. ನಾಲ್ಕು ಜನ ಕುಳಿತಿದ್ದಾರೆ ಆದರೆ ಅಲ್ಲಿ ಮಾತು ಭಾವನೆಗಳ ರೂಪದಲ್ಲಿ ಹೊರಗೆ ಬರ್ತಾ ಇದೆ. ಪ್ರತಿಯೊಬ್ಬರೂ ನಗುತ್ತಾ ಇದ್ದಾರೆ ಖುಷಿಯನ್ನ ಹಂಚಿಕೊಳ್ಳುತ್ತಿದ್ದಾರೆ. ಆದರೆ ನನಗೆ ಅವರ ಯಾವುದೇ ವಿಚಾರಗಳು ಏನು ಅರ್ಥವಾಗಲಿಲ್ಲ. ಏನು ನಡಿತಾ ಇದೆ ಅನ್ನೋದು ಗೊತ್ತಾಗ್ಲಿಲ್ಲ. ಆದರೂ ಅವರ ಬದುಕು ಅದ್ಭುತವಾಗಿತ್ತು. ಪ್ರತಿಯೊಬ್ಬರ ಭಾವನೆಗಳ ಮೂಲಕವೇ ಜಗತ್ತಿನ ಹಲವು ವಿಚಾರಗಳು ಕಣ್ಣ ಮುಂದೆ ಬಂದಿತ್ತು. ಚಂದ್ರಯಾನದ ಸುದ್ದಿಗಳಿದ್ದವು. ರಾಜಕಾರಣದ ರಸ ನಿಮಿಷಗಳಿದ್ದವು, ಪ್ರೀತಿಯ ಮಾತುಗಳಿದ್ದವು, ಹಾಸ್ಯ ಸನ್ನಿವೇಶಗಳಿದ್ದವು, ಆ ಅದ್ಭುತ ಜಗತ್ತಿನ ಒಳಗೆ ಒಂದು ಸಲ ಹಾದು ಹೋಗಿ ಬರುವ ಖುಷಿ ನನಗೆ ಸಿಕ್ಕೇ ಬಿಟ್ಟಿತು . ಅವರಲ್ಲಿ ದುಡ್ಡಿಗೆ ಚಿಲ್ಲರೆ ಇರಲಿಲ್ಲ ಅಂತೆ. ಆ ದೊಡ್ಡ ನೋಟಿಗೊಂದು ಚಿಲ್ಲರೆ ನೀಡುವ ಭಾಗ್ಯ ಮಾತಿಲ್ಲದೆ ಭಾವನೆಗಳ ಮೂಲಕ ನನಗೆ ದಾಟಿತು. ಆ ಅನುಭವವೇ ಅದ್ಭುತ. ಆ ಲೊಕದಲ್ಲಿ ಬದುಕಿ ಬಿಡಬೇಕು. ಮೌನದಲ್ಲಿ ಎಷ್ಟೊಂದು ವಿಚಾರಗಳು ಅಡಗಿವೆ. ಮಾತು ಒಂದು ಚೂರು ಕಡಿಮೆ ಮಾಡಿ ಮೌನದ ದಾರಿಯಲ್ಲಿ ಸಾಗಿದ್ರೆ ಒಂದಷ್ಟು ಸಮಸ್ಯೆಗಳು ಕಡಿಮೆಯಾಗಬಹುದು ಅನ್ನಿಸ್ತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ