ಸ್ಟೇಟಸ್ ಕತೆಗಳು (ಭಾಗ ೭೦೫) - ಚಾಲಕ
ಕಾಪಾಡಲೇಬೇಕು, ಒಳಗಿರುವ ಜೀವದ ದನಿಗೆ ನೋವಿನ ಸ್ವರಕ್ಕೆ ಮತ್ತೊಂದಿಷ್ಟು ಚೈತನ್ಯ ತುಂಬಿ ಬದುಕುವ ಆಸರೆ ನೀಡಬೇಕು. ಒಳಗಿರುವವರು ನಂಬಿರುವುದು ಆ ಚಾಲಕನನ್ನು ಮಾತ್ರ. ಆತ ಜೀವವನ್ನು ಕೈಯಲ್ಲಿ ಹಿಡಿದು ತನ್ನ ಗಾಡಿಯೊಳಗಿನ ಜೀವಗಳನ್ನ ಉಳಿಸುವುದಕ್ಕಾಗಿ ಪರಿಶ್ರಮ ಪಡುತ್ತಾನೆ. ಮನೆಗಿಂತ ಜಾಸ್ತಿ ಆ ವಾಹನದ ಒಳಗೆ ಸಮಯವನ್ನು ಕಳೆದಿದ್ದಾನೆ. ದಿನವೂ ತನ್ನಿಂದ ಆದಷ್ಟು ಸಮಾಜಸೇವೆಗಾಗಿ ಸಮಯ ಮುಡಿಪಾಗಿಟ್ಟಿದ್ದಾನೆ. ಗುರುತಿಲ್ಲದ ರಸ್ತೆಗಳಲ್ಲಿ ಕಷ್ಟವಾದ ಪರಿಸ್ಥಿತಿಗಳಲ್ಲಿ ಕಣ್ಣೀರಲಿ ಎಲ್ಲಾ ಕಡೆಯೂ ತಾನು ಜೊತೆಗೆ ನಿಂತಿದ್ದಾನೆ. ಆದರೆ ಆ ದಿನ ಭಗವಂತನಿಗೆ ಇವನನ್ನೇ ಜನ ಇಷ್ಟಪಡುತ್ತಾರೆ ಅನ್ನೋ ಕಾರಣಕ್ಕೆ ಪ್ರಾಣ ಉಳಿಸುವುದಕ್ಕೆ ಹೊರಟವನನ್ನ ದೇವರು ತನ್ನ ಬಳಿಗೆ ಕರೆದುಕೊಂಡುಬಿಟ್ಟ.ತುರ್ತಿನ ಸಂಧರ್ಭ ಒಳಗಿನ ಜೀವ ಉಳಿಸುವುದ್ದಕ್ಕೆ ಅಕ್ಸಿಲೇಟರ್ ತುಳಿಯುತ್ತಾ ಸಾಗುತ್ತಿದ್ದ, ಆ ಧಾವಂತದಲ್ಲಿ ತನ್ನೊಳಗಿನ ಉಸಿರು ಚೆಲ್ಲಿದ. ಭಗವಂತನಿಗೂ ಹೊಟ್ಟಯುರಿಯೂ ಏನೋ ಉಸಿರು ಉಳಿಸುವವನೊಬ್ಬ ಜನರಿಗೆ ಭಗವಂತನಾಗುತ್ತಿದ್ದಾನೆ ಎಂದು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ