ಸ್ಟೇಟಸ್ ಕತೆಗಳು (ಭಾಗ ೭೧೦) - ಯಾರು?

ಈ ದಾರಿ ತಪ್ಪಿಸುತ್ತಿರುವವರು ಯಾರು? ಗೊತ್ತಾಗುತ್ತಿಲ್ಲ. ಒಳಗಿರುವವನೋ ಹೊರಗಿರುವವನೋ ಗೊತ್ತಾಗುತ್ತಿಲ್ಲ. ಇಷ್ಟರವರೆಗೆ ಅಂದುಕೊಂಡಿದ್ದೆ ಒಂದಷ್ಟು ವಿಚಾರಗಳನ್ನ ಪಟ್ಟಿ ಮಾಡಿ ಹೀಗಾಗಬೇಕಿತ್ತು, ಇದನ್ನ ಮಾಡಬೇಕಿತ್ತು, ಇದನ್ನೆಲ್ಲಾ ಯೋಚಿಸಿ ಯೋಚಿಸಿ ನಿರ್ಧಾರ ಮಾಡಿ ಹೆಜ್ಜೆಯನ್ನ ಇರಿಸಿದ್ದೆ. ಆದರೆ ಹೆಜ್ಜೆಗಳು ಯಾವುದು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ. ಅಂದರೆ ಒಳಗೆ ಕೂತವನು ಏನೋ ತೊಂದರೆ ಮಾಡ್ತಾ ಇದ್ದಾನೋ ಅಥವಾ ಒಳಗೆ ಕೂತವನಿಗೆ ಹೊರಗೆ ಇರುವವನನ್ನ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕು ಅನ್ನುವ ಯೋಚನೆಯು ಇಲ್ಲವೋ ಒಂದು ಅರ್ಥ ಆಗುತ್ತಿಲ್ಲ. ಈಗ ಒಳಗಿರುವ ಅವನನ್ನು ಸರಿ ಮಾಡಬೇಕೋ ಹೊರಗಿರುವವನಿಗೆ ಬುದ್ಧಿ ಕಲಿಸಬೇಕೋ... ನಿಮ್ಮ ಪ್ರಕಾರ ಏನಾಗಬೇಕು. ಒಂದಷ್ಟು ಬದಲಾವಣೆ ತುಂಬಾ ಅಗತ್ಯವಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ