ಸ್ಟೇಟಸ್ ಕತೆಗಳು (ಭಾಗ ೭೨೮) - ಬನ್ನಿ
ಭಗವಂತ ಭೂಮಿಗೆ ಇಳಿದು ಬಿಟ್ಟಿದ್ದಾನೆ .ಅದಕ್ಕೋಸ್ಕರ ಹಲವಾರು ಸಮಯ ಕಾದು ಕಾದು ಇದೀಗ ಅಬ್ಬರದ ದಿನಗಳನ್ನು ಕಳೆಯುವುದಕ್ಕೆ ಕಾಯುತ್ತಿದ್ದಾನೆ .ಬಂದ ದಿನದಿಂದ ಆರಂಭಿಸಿ ಕೆಲವೇ ದಿನಗಳು ಈ ಭೂಮಿಯಲ್ಲಿ ಇರೋದಾದರೂ ಕೂಡ ಬಂದಂದಿನಿಂದ ಅವನನ್ನ ಪ್ರತಿಯೊಬ್ಬರು ಆರಾಧಿಸುವವರೇ. ಪ್ರೀತಿಯಿಂದ ಪೂಜಿಸುವವರು ಭಕ್ತಿಯಿಂದ ಆರಾಧಿಸೋರು ಧೈರ್ಯ ಕೊಡು ಎಂದು ಬೇಡೋರು ಹೀಗೆ ಬೇರೆ ಬೇರೆ ಕಾರಣಗಳಿಗೆ ಅವನನ್ನ ಮುತುವರ್ಜಿ ವಹಿಸುತ್ತಾರೆ. ನಾನಾವಿಧದ ರೂಪಗಳಲ್ಲಿ ಚಿತ್ರಿಸಿ ವಿವಿಧ ಆಕಾರ ಬಣ್ಣಗಳಲ್ಲಿ ದೇವನನ್ನ ನೋಡಿ ಕೈಮುಗಿದು ಪ್ರಾರ್ಥಿಸುತ್ತಾರೆ. ಅವರಿಗೊಂದು ಭಕ್ತಿಗೆ ಕಾರಣ ಬೇಕು. ಎಲ್ಲಕ್ಕೂ ತನ್ನನ್ನ ಒಗ್ಗಿಸಿಕೊಂಡು ತನಗೆ ಇಷ್ಟವಾದುದನ್ನ ಸ್ವೀಕರಿಸಿ ಒಳಿತ ನುಡಿಯುವವನು ಆ ಗಣಪತಿ. ಆದ ಕಾರಣ ಎಲ್ಲ ಆರಾಧನೆಗೆ ಎಲ್ಲರ ಆರಾಧನೆಗೆ ಆತ ಒಪ್ಪಿಕೊಂಡಿದ್ದಾನೆ. ಹಾಗಾಗಿ ಗಣಪತಿ ಕಾಯುತ್ತಿದ್ದಾನೆ. ತನ್ನ ಆಗಮನದ ದಿನಕ್ಕೆ ಜನರ ಒಳಿತು ಕಷ್ಟ ತಿಳಿಯೋದಕ್ಕೆ, ಬದಲಾವಣೆಯಾಗುವುದಕ್ಕೆ ಹೊಸ ವಿಚಾರ ಅರ್ಥೈಸಿಕೊಳ್ಳುವುದಕ್ಕೆ... ನಮ್ಮ ಕಾಲೇಜಿಗೆ ಬಂದು ಮಾತುಕತೆ ಆರಂಬಿಸಿದ್ದಾನೆ. ಬನ್ನಿ ನೀವೂ ಮಾತಾಡೋಣ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ