ಸ್ಟೇಟಸ್ ಕತೆಗಳು (ಭಾಗ ೭೩೧) - ನೆನಪು
ಮನಸ್ಸು ತುಂಬಿ ಬಂದಿತ್ತು. ಆದರೆ ಮೌನದ ನೋವು ಇನ್ನಷ್ಟು ಗಾಢತೆಯನ್ನು ಹೆಚ್ಚಿಸಿತ್ತು. ಮೂರು ದಿನದ ಸಂಭ್ರಮಕ್ಕೆ ಇಂದು ಮುಕ್ತಾಯದ ಚುಕ್ಕಿಯನ್ನು ಇಟ್ಟಾಗಿತ್ತು. ವೈಭವದ ಮೆರವಣಿಗೆಯಲ್ಲಿ ಕೆರೆಯೊಳಗೆ ಮುಳುಗಿ ಲೀನವಾಗುವ ಆ ಶುಭ ಗಳಿಗೆಗೆ ಪ್ರತಿಯೊಬ್ಬರು ಕಾಯುತ್ತಿದ್ದವರು ಸಂಪ್ರೀತರಾದರು. ಮೂರು ದಿನ ಆತ್ಮೀಯನಾಗಿದ್ದ ಗಣಪ ನೀರೊಳಗೆ ಮುಳುಗಿ ಕರಗಿ ಹೋದ ಹಾಗೆ ಭಾರವಾದ ಹೆಜ್ಜೆಗಳು ಗೂಡು ಸೇರಿದವು. ತಿಂಗಳಿಂದ ಪಟ್ಟ ಪರಿಶ್ರಮವನ್ನ ಮತ್ತೆ ತೆರವುಗೊಳಿಸೋ ಕಾರ್ಯ. ಸೂರ್ಯ ನೆತ್ತಿಯ ಮೇಲೆ ಬರೋದರೊಳಗೆ ಎಲ್ಲವೂ ಸ್ವಚ್ಛವಾಯಿತು. ಮನಸ್ಸಿನೊಳಗಿನ ಅದ್ಭುತ ನೆನಪುಗಳ ಹೊರತು. ಅರ್ಥವಾಯಿತು ಮನಸ್ಸುಗಳಿಗೆ ಕಟ್ಟೊದು ಕಷ್ಟ ಕೆಡವೋದು ಸುಲಭ ಅಂತಾ. ಸಂಭ್ರಮದ ಘಳಿಗೆಗಳನ್ನು ಅನುಭವಿಸುವುದಕ್ಕೆ ಹೆಜ್ಜೆ ಇಟ್ಟವರು ನಾಳೆಯಿಂದ ತರಗತಿಯ ಒಳಗಿನ ಪಾಠದ ಕಡೆಗೆ ಮನಸ್ಸನ್ನ ಕೇಂದ್ರೀಕರಿಸಬೇಕು. ಖಾಲಿಯಾದ ಸ್ಥಳಗಳು, ವರಾಂಡಗಳು ಮತ್ತೆ ಮತ್ತೆ ನೆನಪುಗಳನ್ನು ನೆನಪಿಸುತ್ತವೆ. ಸಮಯ ಚಲಿಸುತ್ತಿದೆ. ಜವಾಬ್ದಾರಿ ಹೆಗಲು ದಾಟುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ