ಸ್ಟೇಟಸ್ ಕತೆಗಳು (ಭಾಗ ೭೩೪) - ಆಡಂಬರ

ಸ್ಟೇಟಸ್ ಕತೆಗಳು (ಭಾಗ ೭೩೪) - ಆಡಂಬರ

ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ ದೈವಿ ಶಕ್ತಿಯನ್ನು ತುಂಬಿಸಿ ಆರಾಧನೆ ಮಾಡಿ ವಿಸರ್ಜನೆ ಮಾಡುತ್ತೀಯಾ, ಆದರೆ ಇದರ ನಡುವೆ ನನ್ನನ್ನು ಬೆಳ್ಳಿಯ ಅಲಂಕಾರಿಕ ವಸ್ತುಗಳಿಂದ ಮುಚ್ಚುವುದು ಯಾತಕೆ ? ನನ್ನ ಕಣ್ಣುಗಳು ತುಂಬಾ ಸುಂದರವಾಗಿ ಕಾಣುತ್ತಿರುತ್ತದೆ ಅಲ್ಲಿಗೆ ಬೆಳ್ಳಿಯ ಪರದೆಗಳು ಯಾಕೆ? ನನ್ನ ದಂತಗಳು ಮಣ್ಣಿನಿಂದ ಹೊಳೆಯುತ್ತಿರುವಾಗ ಬೆಳ್ಳಿಯ ದಂತವನ್ನು ಸಿಕ್ಕಿಸಿ ಅದೇನು ಸಾಧಿಸುವುದಕ್ಕೆ ಹೊರಟಿದ್ದೀಯ? ಬೆಳ್ಳಿಯ ಕಿರೀಟಗಳು ಬೆಳ್ಳಿಯ ಆಯುಧಗಳು ಎಲ್ಲವನ್ನು ನನ್ನ ದೇಹದ ತುಂಬೆಲ್ಲ ಹಾಕಿ ನೀನೊಬ್ಬ ಅದ್ಬುತ ಶ್ರೀಮಂತ ಅಂತ ತೋರಿಸೋದಕ್ಕೆ ಹೊರಟಿದ್ದೀಯ? ನಿನ್ನ ಬಳಿ ತುಂಬಾ ಹಣ ಇದೆ ಹಾಗಾಗಿ ಭಗವಂತನಿಗೆ ನಾನು ಕೊಡುಗೆಗಳನ್ನು ಕೊಟ್ಟಿದ್ದೇನೆ ಅನ್ನುವ ಅಹಮ್ಮಿಗೆ ಮೆರೆಯುವುದಕ್ಕೆ ಸ್ಥಳಗಳನ್ನು ಹುಡುಕುತ್ತಿದ್ದೀಯ ಗೊತ್ತಿಲ್ಲ. ನೀರಿನಲ್ಲಿ ವಿಸರ್ಜಿಸುವಾಗ ನಿನ್ನ ಯಾವುದೇ ಬೆಳ್ಳಿಯ ವಸ್ತುಗಳನ್ನು ವಿಸರ್ಜಿಸುವುದಿಲ್ಲ ನನ್ನ ಮೂಲ ರೂಪವನ್ನು ಮಾತ್ರ ವಿಸರ್ಜಿಸುತ್ತೀಯಾ, ಹಾಗಿರುವಾಗ ಮೂಲ ರೂಪವನ್ನು ಮಾತ್ರ ಆರಾಧಿಸುವುದಕ್ಕೆ ನಿನಗೆ ಏನು? ಗೊತ್ತಿಲ್ಲ ನಿನ್ನ ಈ ಆಲೋಚನೆಗಳು ನಿನ್ನ ಈ ಆಡಂಬರಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾನೆ ಅನಗತ್ಯ ಖರ್ಚನ್ನ ಹೆಚ್ಚು ಮಾಡುತ್ತಾನೆ ಇರುತ್ತದೆ .ಹಾಗಾಗಿ ಒಂದು ಸಲ ಯೋಚಿಸು ನಿನ್ನ ದಾರಿ ಸರಿ ಇದೆಯಾ? ಮಾಡುತ್ತಿರುವ ವಿಧಾನ ಸರಿ ಇದೆಯಾ ? ಭಕ್ತಿಯ ನಡುವೆ ಆಡಂಬರ ಸುಳಿದಾಡುತ್ತಿದೆಯಾ ಅಂತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ