ಸ್ಟೇಟಸ್ ಕತೆಗಳು (ಭಾಗ ೭೩೬) - ಪ್ರಸಾದ

ಸ್ಟೇಟಸ್ ಕತೆಗಳು (ಭಾಗ ೭೩೬) - ಪ್ರಸಾದ

ಆ ಕಾರ್ಯಕ್ರಮದಲ್ಲಿ ಇಟ್ಟ ಅನ್ನವು ಪ್ರಸಾದವಾಗಿ ಎಲ್ಲರಿಗೂ ಹಂಚಿಕೆ ಆಯಿತು. ಮನೆಯಲ್ಲಿ ಸಿಗುವ, ಹೋಟೆಲ್ ಇಡುವ ಅನ್ನ ಅದೇ ಅದರೂ ಅದು ಪ್ರಸಾದವಾಗುವುದಿಲ್ಲ. ಆದರೆ ಆ ದೇವರ ಸಾನಿಧ್ಯದಲ್ಲಿ  ಭಕ್ತಿ ಸೇರಿದ್ದಕ್ಕೆ ಪ್ರಸಾದವಾಯಿತು. ಲಾಭದ ಉದ್ದೇಶವಿಲ್ಲದೆ ಪ್ರೀತಿಯಿಂದ ಮಾಡಿದ ಕೆಲಸಕ್ಕೆ ಅನ್ನಪ್ರಸಾದವಾಯಿತು. ಹಾಗಾದ್ರೆ ನಾವು ಮಾಡುವ ಕೆಲಸ ಪ್ರಸಾದವಾಗುವುದು ಹೇಗೆ? ಮನುಷ್ಯನೇ ಪ್ರಸಾದವಾಗುವುದು ಹೇಗೆ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಮನುಷ್ಯನೇ ಪ್ರಸಾದವಾಗಬೇಕಾದರೆ ಲಾಭವಿಲ್ಲದ ನಿಷ್ಕಲ್ಮಶವಾದ ಸೇವೆಯನ್ನು ಮಾಡುವಂತವನಾಗಬೇಕು. ಆದರೆ  ಇಲ್ಲಿ ಪ್ರಸಾದವಾಗುವ ಯಾವ ಯೋಚನೆಯೂ ಇರುವುದಿಲ್ಲ. ಹಾಗಾದ್ರೆ ಮನುಷ್ಯನೇ ತಯಾರಿಸಿದ ಅನ್ನವು ಪ್ರಸಾದವಾಗುವಾಗ ದೇವರು ಕಳುಹಿಸಿಕೊಟ್ಟ ನಾವು ಪ್ರಸಾದವಾಗುವ ಬಗೆಯನ್ನ ಅರಿತುಕೊಂಡಾಗ ಮಾತ್ರ ಈ ಬದುಕಿಗೆ ಬಂದು ಅರ್ಥ ಸಿಗಬಹುದು. ನಾನು ತುಂಬಾ ಆಧ್ಯಾತ್ಮಿಕವಾಗಿ ಯೋಚನೆ ಮಾಡುತ್ತಿದ್ದೇನಾ ? ಹಾಗಾಗಿ ನೀವು ತಿಳಿದವರು ಅನ್ನ ಪ್ರಸಾದವಾಗುವ ಬಗೆಯನ್ನು ನಾನರ್ಥೈಸಿಕೊಂಡಿದ್ದೇನೆ .ನಾನು ಮಾಡುವ ಕೆಲಸ ಭಗವಂತನಿಗೆ ಪ್ರಸಾದವಾಗಬೇಕಾದರೆ ನನ್ನ ಕಾರ್ಯ ವೈಖರಿ ಹೇಗಿರಬೇಕು ಅನ್ನೋದು ನಿಮ್ಮಿಂದ ತಿಳಿದುಕೊಳ್ಳುವ ಬಯಕೆ ಹಾಗಾಗಿ ಈ ಪತ್ರವನ್ನ ಬರೆದಿದ್ದೇನೆ. ಹೀಗೊಂದು ಪತ್ರ ಭಗವಂತನ ಪದ ತಳಕ್ಕೆ ಬಂದು ಬಿದ್ದಿತ್ತು. ಭಗವಂತನಿಗೆ ಉತ್ತರಿಸುವ ಅವಕಾಶ ಇಲ್ಲದ ಕಾರಣ ಅದನ್ನ ಮತ್ತೆ ನನ್ನ ಬಳಿಗೆ ತಳ್ಳುತ್ತಿದ್ದಾನೆ. ನನಗೆ ಉತ್ತರ ಗೊತ್ತಾಗದ ಕಾರಣ ನಿಮ್ಮಲ್ಲಿ ತಿಳಿಸಿದ್ದೇನೆ ತಿಳಿದವರು ಉತ್ತರ ದಯಪಾಲಿಸಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ