ಸ್ಟೇಟಸ್ ಕತೆಗಳು (ಭಾಗ ೭೩೮) - ದಾರಿ
ಅವನು ನಡೆಯೋದಕ್ಕೆ ಆರಂಭ ಮಾಡಿದ್ದ. ಅದು ಈಗಿನಿಂದಲ್ಲ. ತುಂಬಾ ಸಮಯದಿಂದ ಆತನ ಗುರಿ ಒಂದಷ್ಟು ದೂರದವರೆಗೆ ಆತನಿಗೆ ಗೊತ್ತಿತ್ತು. ಅದರಿಂದ ಆಚೆಗಿನ ದಾರಿಯ ಬಗ್ಗೆ ಅವನಿಗೂ ಅರಿವಿರಲಿಲ್ಲ. ಆತ ಒಂದನ್ನು ಮೈಲುಗಲ್ಲುಗಳನ್ನು ಮೊದಲೇ ಗುರುತಿಸಿ ಇಟ್ಟುಕೊಂಡು ತಾನಲ್ಲಿಗೆ ಸಾಗಬೇಕು ಎಂದುಕೊಂಡಿದ್ದ. ಆದರೆ ಜೊತೆ ಸಾಗುವವರು ತುಂಬಾ ಜನ ಇದ್ದುಬಿಟ್ಟಿದ್ದರು. ಎಲ್ಲರನ್ನು ದಾಟಿ ತಾನು ಮುಂದೆ ಹೋಗಬೇಕು ಅನ್ನೋದು ಆತನ ಗುರಿಯಾಗಿತ್ತು. ಹಾಗಾಗಿ ಹೊರಟಿದ್ದ ದಾರಿಯಲ್ಲಿ ಒಂದಷ್ಟು ಮೈಲುಗಲ್ಲುಗಳನ್ನು ದಾಟುತ್ತಾ ಜೀವನದ ಉತ್ಸಾಹಗಳನ್ನು ಹೆಚ್ಚಿಸಿಕೊಂಡು ಇನ್ನೊಂದಷ್ಟು ದೂರ ಸಾಗಿ ಬರ್ತಾ ಹೋಗಿದ್ದ. ಅವನಿಗೆ ಮುಂದೊಂದು ಮೈಲಿಗಳು ತುಂಬಾ ಚೆನ್ನಾಗಿ ಕಾಣ್ತಾ ಇತ್ತು. ಆ ಮೈಲಿಗಲ್ಲನ್ನು ತಲುಪಿ ಒಂದಷ್ಟು ಗಟ್ಟಿಯಾಗಿ ನಿಂತು ತಾನು ತಲುಪಿದ ದಾರಿಯನ್ನು ಒಂದಷ್ಟು ಜನರಿಗೆ ತಿಳಿಸಿ ಮತ್ತೆ ಮುಂದೆ ಸಾಗಬೇಕು ಅಂದುಕೊಂಡಿದ್ದ ಆದರೆ ಅದೇನು ಕಾಲ ನಿರ್ಣಯವೋ ಗೊತ್ತಿಲ್ಲ ಆ ಹೊಸದೊಂದು ಮೈಲಿಗಲ್ಲಿನ ಬಗ್ಗೆ ಆತ ಇಷ್ಟರವರೆಗೂ ಯೋಚನೆ ಮಾಡಿರಲಿಲ್ಲ. ಅದಲ್ಲದೆ ಆತ ಸಾಗುವ ದಾರಿಯಲ್ಲಿ ಆ ಮೈಲಿಗಲ್ಲಿನ ಪ್ರಭಾವ ಅಷ್ಟು ಮುಖ್ಯವಾಗಿಯೂ ಇರಲಿಲ್ಲ. ಆತನಿಗೆ ತಾನು ಕನಸು ಕಂಡಿದ್ದ ಆ ಮುಂದಿನ ಮೈಲಿಗಲ್ಲನ್ನು ತಲುಪುವುದಕ್ಕೆ ಇನ್ನಷ್ಟು ಸಮಯ ಹಿಡಿಯುತ್ತೋ ಅನ್ನುವ ಯೋಚನೆ. ಮನಸ್ಸಿಗೆ ಒಳಗೆ ಸಾಗಲೇಬೇಕು. ಅಲ್ಲೇ ನಿಂತು ಕಾಲ ಕಳೆಯೋಕೆ ಸಾಧ್ಯವಾಗುವುದಿಲ್ಲ. ಈಗ ಕಣ್ಣ ಮುಂದಿನ ಮೈಲಿಗಲ್ಲನ್ನು ತೊರೆದು ಮುಂದೆ ಸಾಗಲು ಆರಂಭ ಮಾಡಿದ. ಆತನಿಗೆ ನಿರ್ಧಾರ ಸ್ಪಷ್ಟವಾಗಿತ್ತು. ಹಾಗಾಗಿ ಸಾಗುವ ದಾರಿಗಳಲ್ಲಿ ಮೈಲಿಗಲ್ಲುಗಳು ಕೆಲವೊಂದು ಸಲ ಒಂದಷ್ಟು ತಡೆ ಹಿಡಿದರೆ ಇನ್ನೊಂದಷ್ಟು ಪೂರ್ತಿ ನೀಡುತ್ತದೆ. ಪೂರ್ತಿ ವಿಚಾರ ಪಡೆದುಕೊಂಡು ಇನ್ನೊಂದಷ್ಟು ಹೆಚ್ಚು ಶಕ್ತಿಯಿಂದ ಮುಂದೆ ಹೋಗುವುದಕ್ಕೆ ಆರಂಭ ಮಾಡಬೇಕು. ಆಗ ಮೈಲಿಗಲ್ಲುಗಳ ನಮ್ಮನ್ನು ಸ್ವಾಗತಿಸುತ್ತವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ