ಸ್ಟೇಟಸ್ ಕತೆಗಳು (ಭಾಗ ೭೪೫) - ಪ್ರಶ್ನೋತ್ತರ
ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುತ್ತದೆ. ಪ್ರತಿಯೊಂದು ಉತ್ತರವು ಕೆಲವೊಂದು ಪ್ರಶ್ನೆಗಳನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಂದು ಸಲ ರಾಶಿ ಉತ್ತರಗಳನ್ನು ನಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಶ್ನೆಗಳನ್ನು ಹುಡುಕಾಡುತ್ತಾ ಇರುತ್ತೇವೆ. ಸರಿಯಾದ ಪ್ರಶ್ನೆಗಳೇ ಸಿಗುವುದಿಲ್ಲ. ಹಾಗಾದರೆ ಉತ್ತರಗಳು ಬಿಕರಿಯಾಗದೇ ಮಾರಟವಾಗದೇ ನಮ್ಮಲ್ಲೇ ಉಳಿದು ಕೊಳೆದು ಮರೆತು ಹೋಗಿ ಬಿಡುತ್ತದೆ. ಕೆಲವೊಂದು ಸಮಯದಲ್ಲಿ ಉತ್ತರ ಸಿಗುವವರಲ್ಲಿ ಹುಡುಕುತ್ತಾ ಹೋದ ಹಾಗೆ ಉತ್ತರ ಸಿಗದೆ ಪ್ರಶ್ನೆಗಳೇ ಸೋತು ಬೇಜಾರಾಗಿ ತೆರೆಮರೆಗೆ ಸರಿದು ಬಿಟ್ಟು ಹೊಸ ಪ್ರಶ್ನೆಗಳು ಹುಟ್ಟುತ್ತವೆ. ಭಗವಂತ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಇಟ್ಟಿರುತ್ತಾನೆ. ಕೆಲವೊಂದು ಉತ್ತರಗಳು ಕೆಲವೊಂದು ಕಡೆಗಳಿಂದ ಬಂದಾಗ ಮಾತ್ರ ಸರಿಯಾದ ಅಂಕಗಳನ್ನು ಪಡೆದುಕೊಡುತ್ತವೆ. ಕೆಲವೊಂದು ಸಲ ತಪ್ಪಾಗಿ ಅರ್ಥೈಸಿಕೊಂಡು ತಪ್ಪು ಅರ್ಥದಿಂದ ಪರಿಣಾಮವನ್ನು ಪಡೆದುಕೊಳ್ಳಕ್ಕಾಗದೆ ಇರುವಂತಹ ಸ್ಥಿತಿಯನ್ನು ತಲುಪುತ್ತೇವೆ. ಹಾಗಾಗಿ ಒಂದಷ್ಟು ಪ್ರಶ್ನೆಗಳ ಹುಡುಕಾಟದಲ್ಲಿದ್ದೇನೆ. ಕೆಲವೊಂದಷ್ಟು ಉತ್ತರಗಳ ಹುಡುಕಾಟದಲ್ಲಿ ಇದ್ದೇನೆ. ಬದುಕು ಪ್ರಶ್ನೋತ್ತರಗಳ ಸಹಯೋಗದಲ್ಲಿದ್ದರೆ ಇನ್ನೊಂದಷ್ಟು ಸುಂದರವಾಗಿ ಕಾಣುತ್ತದೆ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ