ಸ್ಟೇಟಸ್ ಕತೆಗಳು (ಭಾಗ ೭೪) - ಬದಲಾಗಬೇಕಾಗಿದೆ?

ಸ್ಟೇಟಸ್ ಕತೆಗಳು (ಭಾಗ ೭೪) - ಬದಲಾಗಬೇಕಾಗಿದೆ?

ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ? ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತು‌ಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ? ನಮ್ಮ ದೈನಂದಿನ ಬದುಕು ಮಾಂಸ, ಹಾಲು ಅಗತ್ಯವೇನಲ್ಲ! ಅದನ್ನು ನಾವೇ ರೂಪಿಸಿದ್ದೇವೆ. ಆ ಜೀವಿಗಳ ನೋವನ್ನು ಒಂದಿನವಾದರೂ ಕೇಳಿದ್ದೇವಾ? ಅವುಗಳೆಷ್ಟು ನೋವಿನಿಂದ ಮರಣಿಸಿದ್ದವೋ?, ಅದು ನಮ್ಮ ಪಾತ್ರೆಯೊಳಗೆ ಬೆಂದಾಗ ಆ ವೇದನೆಯ ಶಾಖ ನಮಗಿನ್ನೂ ತಟ್ಟಲಿಲ್ಲವೇ? ಚಿಂತನೆಯ ಬಿಂದುಗಳೆಲ್ಲ ಜೊತೆಗೂಡುತ್ತಾ ಸಮುದ್ರವಾಗಿ ತಡೆಗೋಡೆಗಳನ್ನು ಸೀಳಿ ಮುನ್ನುಗುತ್ತಿದೆ. ಇನ್ನೇನು ನಿರ್ಧಾರವೆಂಬ ಬಲವಾದ ಅಣೆಕಟ್ಟು ಕಟ್ಟಬೇಕು ಅನ್ನುವಷ್ಟರಲ್ಲಿ.... 

"ಸರ್ ನಿಮ್ಮ ಪಾಲಿನ ಕಬಾಬ್ ಡಬ್ಬಿಯಲ್ಲಿ ಇಟ್ಟಿದ್ದೇನೆ"

"ವಾವ್ ಏನ್ ರುಚಿ" 

ಹಲ್ಲಿನಲ್ಲಿ ಸಿಕ್ಕಿಬಿದ್ದ ಮಾಂಸದ ಎಳೆಯನ್ನ ಎಬ್ಬಿಸಲು ಕಡ್ಡಿ ಹುಡುಕುತ್ತಿದ್ದೆ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ