ಸ್ಟೇಟಸ್ ಕತೆಗಳು (ಭಾಗ ೭೫೭) - ನದಿ
ನದಿ ಹುಟ್ಟುವಾಗಲೇ ಒಂದು ಸಣ್ಣ ಸಭೆಯನ್ನು ಕರೆದಿತ್ತು. ನಾವು ಹರಿದು ಹೋಗುವಾಗ ಒಂದಷ್ಟು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು? ಎಲ್ಲಿ ಏರಬೇಕು ?ಎಲ್ಲಿ ಇಳಿಯಬೇಕು, ಎಲ್ಲಿ ಎತ್ತರದಿಂದ ಧುಮುಕಬೇಕು. ಎಲ್ಲಿ ನಿಲ್ಲಬೇಕು ಎಲ್ಲಿ ನಿಧಾನವಾಗಿ ಹರಿಯಬೇಕು ಎಲ್ಲಿ ವೇಗವಾಗಿ ಸಾಗಬೇಕು ನಮ್ಮ ಸಾಗುವ ದಾರಿ ಯಾವ ಊರುಗಳನ್ನ ಕಾಡುಗಳನ್ನ ಹಳ್ಳಿಗಳನ್ನ ಪೇಟೆಗಳನ್ನ ಸುತ್ತುವರಿದು ಯಾವ ಸಮುದ್ರವನ್ನು ಸೇರಬೇಕು ಅನ್ನೋದನ್ನ ಸರಿಯಾಗಿ ತಿಳಿಸಿ, ತದನಂತರ ನದಿಗಳು ಹರಿಯುವುದಕ್ಕೆ ಪ್ರಾರಂಭ ಮಾಡಿದವು. ಹಾಗಾಗಿ ನದಿಗಳು ಹರಿಯುತ್ತಾ ಹೋದಾ ಹಾಗೆ ಮನುಷ್ಯರ ಜನಜೀವನ ಪ್ರಾಕೃತಿಕ ವೈವಿಧ್ಯ, ಪರಿಸರ ಉಳಿಸುವಿಕೆಯ ಜೊತೆಗೆ ಹಲವು ಜೀವನ ಕ್ರಮಗಳೇ ಬದಲಾಗುತ್ತಾ ಹೋದವು, ನದಿಗೆ ಇಷ್ಟೆಲ್ಲ ಆಲೋಚನೆಗಳು ಇರುವಾಗ ನಮಗೂ ಕಿಂಚಿತ್ತಾದರೂ ಸೇವಾ ಮನೋಭಾವ ಇರಬೇಕಲ್ವೇ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ