ಸ್ಟೇಟಸ್ ಕತೆಗಳು (ಭಾಗ ೭೬೨) - ಆಗಬೇಕು

ಸ್ಟೇಟಸ್ ಕತೆಗಳು (ಭಾಗ ೭೬೨) - ಆಗಬೇಕು

"ಅಲ್ಲ ನಿನಗೆ ಏನಾಗಬೇಕು? ಏನೋ ಆಗ್ಬೇಕು ಅಂತ ಇರ್ತಿಯಲ್ಲ! ನಿನ್ನ ಮನಸ್ಸಲ್ಲಿ ಏನಿದೆ?"

"ನನ್ನ ಗುರುತು ಪರಿಚಯವಿಲ್ಲದವರಿಗೂ ನಾನ್ಯಾರು ಅನ್ನೋದು ನನ್ನ ಸಾಧನೆಯ ಮೂಲಕ ಗೊತ್ತಾಗಬೇಕು. ನಾನು ಸಾಗುವ ದಾರಿಯಲ್ಲಿ ಅಕ್ಕ-ಪಕ್ಕ ನಿಂತವರಿಗೆ ಹೋಗುವವರಿಗೆ ನನ್ನ ಪರಿಚಯವಿರಬೇಕು. ಯಾವುದೋ ಕಾರ್ಯಕ್ರಮವಾದರೂ ನನ್ನ ಆಗಮನ ಅವರಿಗೆ ವಿಶೇಷ ಅನ್ನಿಸ್ಬೇಕು. ನನ್ನ ಜೊತೆ ನಿಂತು ಮಾತನಾಡುವುದು ಅವರ ಗೌರವವನ್ನು ಇನ್ನಷ್ಟು ಹೆಚ್ಚಿಸಬೇಕು. ನನ್ನ ಹೆಸರು ಪರಿಚಯವನ್ನು ಹೇಳಿಕೊಳ್ಳೋದು ಅವರಿಗದು ಹೆಮ್ಮೆ ತರಿಸಬೇಕು. ನನ್ನ ಬಳಿ ನಿಂತು ಮಾತನಾಡುವುದು ಅವರಿಗೆ ಖುಷಿ ಕೊಡಬೇಕು. ಅದು ವಿಶೇಷ ಅನ್ನಿಸಕೊಬೇಕು.ನನ್ನ ಆಗಮನಕ್ಕೆ ಒಂದಷ್ಟು ತಯಾರಿಯಾಗಿರಬೇಕು. ಕಾಯುತ್ತಿರಬೇಕು. ಇದೊಂದು ನನ್ನ ಪುಟ್ಟ ಆಸೆ."

 "ಆದರೆ ಇದು ಅಹಂಕಾರ ಅಂತ ಅನ್ನಿಸಲ್ವಾ?"

" ನಾನು ಸಾಮಾನ್ಯನಾಗಿರಬೇಕು ಆದರೆ ನಾನು ಮಾಡುವ ಕೆಲಸ ನಾನು ಸಾಗಿ ಬಂದ ಹಾಗೆ ಸದ್ಯಕ್ಕೆ ಜನ ನನ್ನನ್ನು ನೋಡುತ್ತಿರುವ ರೀತಿ ವಿಶೇಷವಾಗಿರಬೇಕು. ಗೌರವ ಪ್ರೀತಿ ಸದಾ ಸಿಗುವಂತಿರಬೇಕು .ಹೀಗೆ ಆಸೆಗಳನ್ನ ಪಟ್ಟಿ ಮಾಡಿ ಒಂದುಕಡೆ ಶೇಖರಿಸಿದ್ದೇನೆ. ಅದಕ್ಕೊಂದು ರೂಪವನ್ನು ಕೊಟ್ಟಿದ್ದೇನೆ .ಒಂದಲ್ಲ ಒಂದು ದಿನ ಅದು ಈಡೇರುತ್ತೆ ಅದಕ್ಕಾಗಿ ಅದನ್ನು ನಾನು ಕನಸು ಕಂಡಿದ್ದೇನೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ