ಸ್ಟೇಟಸ್ ಕತೆಗಳು (ಭಾಗ ೭೬೪) - ಆಹಾರ
ತುಂಬಾ ಹಸಿವಾಗಿದೆ. ಆಹಾರಕ್ಕಾಗಿ ಅಲೆಯುತ್ತಿದ್ದೇನೆ. ಕೆಲವು ದಿನಗಳವರೆಗೆ ನನಗೆ ಆಹಾರದ ಕೊರತೆಯೂ ಇರಲಿಲ್ಲ. ಬೇಕಾದಷ್ಟು ಸಿಗ್ತಾ ಇತ್ತು. ಅದರಲ್ಲಿ ನನಗೆ ಬೇಕಾಗಿರುವುದನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ದಿನ ಕಳೆದಂತೆ ನನ್ನ ಕೆಲಸದ ರೀತಿಗಳು ಬದಲಾದವು. ನನ್ನ ದೈನಂದಿನ ಭೇಟಿಗಳು ವಿಚಾರ ಚಿಂತನೆಗಳು ಎಲ್ಲವೂ ಬದಲಾಗುತ್ತಾ ಹೋದ ಹಾಗೆ ಆಹಾರ ಸಿಗುವುದು ಕಡಿಮೆ ಆಯ್ತು. ಪ್ರತಿದಿನದ ಬದುಕು ಒಂಚೂರು ಕಷ್ಟವಾಯಿತು. ಆಹಾರ ಅಂತ ಹೇಳಿದ್ದು ಮನಸ್ಸಿಗೆ, ದಿನದ ಬರವಣಿಗೆಗೆ. ಒಂದಷ್ಟು ವಿಚಾರಗಳು ಅಲ್ಲಲ್ಲಿ ಸಿಕ್ಕು ಅಕ್ಷರಗಳು ಒಂದಷ್ಟು ಕಥೆಗಳಾಗುತ್ತಿತ್ತು. ಆದರೆ ಈಗ ಆಹಾರ ಸಿಗುವುದೇ ಕಡಿಮೆಯಾಗಿದೆ ಅಂದ್ರೆ ಭೇಟಿಗಳಿಲ್ಲ ಸುತ್ತಮುತ್ತ ಕತೆಯಾಗುವ ವಿಚಾರಗಳು ಕಾಣುತ್ತಿಲ್ಲ .ಅದಕ್ಕಾಗಿ ಅಕ್ಷರಗಳು ಜೋಡಣೆ ಆಗ್ತಾ ಇಲ್ಲ. ಅಥವಾ ನಾನಿರುವ ರೀತಿ ಬದಲಾಗಿದೆಯೋ? ನೋಡುವ ನೋಟ ವಿಚಿತ್ರವಾಗಿದೆಯೋ? ವಿಚಿತ್ರವಾಗಿದೆಯೋ? ಒಂದು ಗೊತ್ತಾಗ್ತಾ ಇಲ್ಲ. ನನಗೆ ಈಗ ಸದ್ಯಕ್ಕೆ ಆಹಾರ ಬೇಕು ಅದಕ್ಕಾಗಿ ಮತ್ತೆ ಮೊದಲಿನಿಂದಾಗಲು ಮನಸ್ಸಿಗೆ ಸಿಗಬೇಕಾದ ಆಹಾರಗಳನ್ನು ಹುಡುಕುತ್ತಿದ್ದೇನೆ. ಆಗ ಕಥೆಗಳು ಅಕ್ಷರಗಳನ್ನ ಜೋಡಿಸಿಕೊಳ್ಳಬಹುದು .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ