ಸ್ಟೇಟಸ್ ಕತೆಗಳು (ಭಾಗ ೭೬೮) - ಖಾಲಿಯಾಗು

ಸ್ಟೇಟಸ್ ಕತೆಗಳು (ಭಾಗ ೭೬೮) - ಖಾಲಿಯಾಗು

ಅದೆಷ್ಟು ದಿನ ಅಂತ ಆ ಗಂಟನ್ನು ಹೊತ್ತು ಕೊಂಡು ಸಾಗುತ್ತೀಯಾ? ಅದಿನ್ನು ಹೆಚ್ಚು ಹೆಚ್ಚು ಭಾರವಾಗ್ತಾನೆ ಹೋಗುತ್ತೆ ನಿನಗೆ ನಡೆಯುವುದಕ್ಕೆ ಕಷ್ಟವಾಗುತ್ತದೆ. ನೋವಾಗುತ್ತದೆ. ಅದರಲ್ಲಿ ಯಾರಿಗಾದರೂ ಕೊಡುವುದಿದ್ದರೆ ಕೊಟ್ಟು ಬಿಡು, ಚೆಲ್ಲಿಬಿಡು. ಸುಮ್ಮನೆ ತಲೆಗೆ ಮೇಲೆ ಹೊತ್ತುಕೊಂಡು ಇನ್ನೊಂದಷ್ಟು ಹೆಚ್ಚು ಭಾರವನ್ನ ಅನುಭವಿಸಿ ನಡೆಯೊಕ್ಕಾಗದ ಪರಿಸ್ಥಿತಿಗೆ ಯಾಕೆ ತಲುಪ್ತೀಯಾ?  ಇಲ್ಲವಾದರೆ ನೀನು ತಲುಪೋ ದೂರ ಆದಷ್ಟು ಬೇಗ ತಲುಪೋದಕ್ಕೆ ಸಾಧ್ಯ ಆಗೋದಿಲ್ಲ. ಮನುಷ್ಯ ಅಂದ್ಮೇಲೆ ನಮಗೆ ಆಸೆಗಳು ಹೆಚ್ಚು ಅದಕ್ಕೆ ಎಲ್ಲವನ್ನ ತುಂಬಿಸಿಕೊಳ್ತಾ ಸಾಗುತ್ತೇವೆ. ಆಗ ಎತ್ತರವನ್ನು ಏರೋದಕ್ಕೆ ಆಗೋದಿಲ್ಲ. ಹಾಗಂದ ಅವರು ನನ್ನ ನೋಡಿ ನಕ್ಕು ಹೊರಟು ಹೋದರು. ನನ್ನಲ್ಲಿ ಯಾವುದೇ ರೀತಿಯ ಗಂಟು ಇರಲಿಲ್ಲ. ಹಾಗಾದರೆ ಅವರು ಹೇಳಿದ ಗಂಟು ಕಣ್ಣಿಗೆ ಕಾಣುವಂತದ್ದಲ್ಲ ಅಂದುಕೊಳ್ಳುತ್ತೇನೆ. ಕಣ್ಣಿಗೆ ಕಾಣದ ಯೋಚನೆ ಆಲೋಚನೆ ಕೋಪಗಳನ್ನು ಹೊತ್ತು ಸಾಗುತ್ತಿರುವಾಗ, ಖಾಲಿಯಾಗಿ ಹೆಚ್ಚು ತುಂಬಿಕೊಳ್ಳುವುದಕ್ಕೆ ತೊರೆದು ಸಾಗಲೇಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ