ಸ್ಟೇಟಸ್ ಕತೆಗಳು (ಭಾಗ ೭೭೫) - ಪ್ರಶಸ್ತಿ

ಸ್ಟೇಟಸ್ ಕತೆಗಳು (ಭಾಗ ೭೭೫) - ಪ್ರಶಸ್ತಿ

ಅದೊಂದು ದೊಡ್ಡ ಬಹುಮಾನ. ಸಾವಿರಾರು ಜನರ ನಡುವೆ ವೇದಿಕೆಯ ಮೇಲೆ ಅವರ ಜೀವಮಾನದ ಸಾಧನೆಗಳನ್ನ ಪರಿಗಣಿಸಿ ಆ ಬಹುಮಾನವನ್ನು ನೀಡಲಾಗುತ್ತದೆ. ಅವರ ಪೂರ್ತಿ ವಿವರಗಳನ್ನ ಪಡೆದುಕೊಂಡಾಗಿತ್ತು. ಈ ವರ್ಷದ ಆ ಬಹುಮಾನ ಅವರ ಪಾಲಾಗುವ ಸುದ್ದಿ ಒಂದಷ್ಟು ಜನರಿಗೆ ತಲುಪಿಯೂ ಆಗಿತ್ತು. ಅವರಿಗೆ ಶುಭಾಶಯಗಳ ಮಹಾಪೂರವು ಸಿಕ್ಕಿತು. ಇಷ್ಟು ವರ್ಷ ಎಲೆ ಮರೆಯ ಕಾಯಿಯಂತೆ ಸಮಾಜಕ್ಕೋಸ್ಕರ ದುಡಿದವರ ಹೆಸರಿಗೆ ಬಹುಮಾನ ಅರಸಿ ಬಂದಿರುವುದು ಎಲ್ಲರಿಗೂ ಸಂತಸವನ್ನು ತಂದಿತ್ತು. ಅವರು ಆ ಬಹುಮಾನವನ್ನ ಸ್ವೀಕರಿಸುವುದಕ್ಕೆ ತಯಾರಾಗಿದ್ದರು. ಕಷ್ಟಪಟ್ಟದ್ದಕ್ಕೆ ಪ್ರತಿಫಲ ಸಿಕ್ಕಿತ್ತಲ್ಲ ಅನ್ನುವ ಸಂಭ್ರಮದಲ್ಲಿದ್ದರು. ಆದರೆ ಪತ್ರಿಕೆಯಲ್ಲಿ ಸಾಧಕರ ಬಹುಮಾನದ ಪಟ್ಟಿಯನ್ನು ಪ್ರಕಟಿಸಿದಾಗ ಅದರಲ್ಲಿ ಅವರ ಹೆಸರು ಇರಲಿಲ್ಲ. ಯಾರಿಗೋ ತುಂಬಾ ಬೇಕಾಗಿದ್ದವರು, ಸದಾ ಇನ್ನೊಬ್ಬರನ್ನು ಹೊಗಳುತ್ತಾ ಹೊಗಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವರ ಹೆಸರು ಪಟ್ಟಿಯಲ್ಲಿ ರಾರಾಜಿಸುತ್ತಿತ್ತು. ಆದರೆ ಈ ಸುದ್ದಿ ಎಲ್ಲೂ ಕೂಡ ಪ್ರಕಟವಾಗಲೇ ಇಲ್ಲ. ಯಾರಿಗೂ ತಿಳಿಯಲೇ ಇಲ್ಲ. ಹಾಗೆ ಪ್ರಶಸ್ತಿಗಳು ಮಾರಾಟವಾಗುತ್ತಿವೆ. ಎಲೆ ಮರೆಯ ಕಾಯಿಗಳು ಮುರುಟಿ ಹೋಗುತ್ತಿವೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ