ಸ್ಟೇಟಸ್ ಕತೆಗಳು (ಭಾಗ ೭೯೧) - ಪ್ರವಾಹ
ಹಾಗೆ ದೊಡ್ಡದೊಂದು ಪ್ರವಾಹ ಬಂದುಬಿಟ್ಟು ಕೊಚ್ಚಿಕೊಂಡು ಹೋಗಲಿ. ಎಲ್ಲರನ್ನಲ್ಲ ಆಯ್ದವರನ್ನು ಮಾತ್ರ. ರಸ್ತೆ ಡಾಂಬರಿಗೆ ಅಂತ ಸರಕಾರದಿಂದ ಹಣ ಬಂದಾಗ ಅದನ್ನ ತಮ್ಮ ತಮ್ಮ ಬೊಕ್ಕಸಕ್ಕೆ ಸೇರಿಕೊಂಡು ಸರಿಯಾಗಿ ರಸ್ತೆ ನಿರ್ಮಾಣವಾಗದ್ದಕ್ಕೆ ಕಾರಣವಾದ ಎಲ್ಲರನ್ನ ಪ್ರವಾಹ ಕೊಚ್ಚಿಕೊಂಡು ಹೋಗಲಿ, ಸರಕಾರಿ ಆಸ್ಪತ್ರೆಗೆ ಬಂದ ಮದ್ದುಗಳನ್ನ ಕದ್ದು ತಿಂದ ಭ್ರಷ್ಟರೆಲ್ಲರೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲಿ, ಶಿಕ್ಷಣವನ್ನ ಮಾರಾಟ ಮಾಡಿ ಹಣ ಮಾಡುತ್ತಿರುವ ದುರುಳರೆಲ್ಲರೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲಿ, ತಮ್ಮ ಓದಿಗೆ ಜೀವನ ಪೂರ್ತಿ ಸವೆಸಿದ ತಂದೆ ತಾಯಿಗಳನ್ನು ಆಶ್ರಮದಲ್ಲಿ ಬಿಟ್ಟು ದೊಡ್ಡ ಹುದ್ದೆಯಲ್ಲಿರುವವರೆಲ್ಲರೂ ಕೊಚ್ಚಿಕೊಂಡು ಹೋಗಲಿ, ನಂಬಿದವರಿಗೆ ಮೋಸ ಮಾಡಿದವರು ಕೊಚ್ಚಿಕೊಂಡು ಹೋಗಲಿ, ದೂರ್ತ ಬದುಕನ್ನ ಸಾಗಿಸುತ್ತಿರುವವರು ಕೊಚ್ಚಿಕೊಂಡು ಹೋಗಲಿ, ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅತ್ಯಾಚಾರಕ್ಕೆ ಪ್ರಯತ್ನಿಸಿದವರು ಅತ್ಯಾಚಾರ ಮಾಡಿದವರು ಕೊಚ್ಚಿಕೊಂಡು ಹೋಗಲಿ, ಸ್ವಂತ ಮಕ್ಕಳ ಕನಸುಗಳಿಗೆ ನೀರೆರೆದು ಪೋಷಿಸದ ತಂದೆ ತಾಯಿಗಳು ಕೊಚ್ಚಿಕೊಂಡು ಹೋಗಲಿ, ಹೀಗೆ ನನ್ನ ಪಟ್ಟಿಯ ಒಳಗೆ ಕೊಚ್ಚಿಕೊಂಡು ಹೋಗಬೇಕಾದವರ ಒಂದಷ್ಟು ಹೆಸರುಗಳನ್ನು ತಯಾರು ಮಾಡಿದ್ದೇನೆ. ನಿಮ್ಮ ಜೀವನದಲ್ಲೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಬೇಕಾದವರ ಪಟ್ಟಿಯು ಇರಬಹುದು. ಹಾಗಂತಿದ್ದರೆ ಈ ಪಟ್ಟಿಗೆ ಅವರನ್ನು ಸೇರಿಸಿಬಿಡಿ. ಎಲ್ಲವೂ ಕೊಚ್ಚಿಕೊಂಡು ಹೋಗಿ ಒಳಿತು ಮಾತ್ರ ಉಳಿದು ಬಿಡಲಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ