ಸ್ಟೇಟಸ್ ಕತೆಗಳು (ಭಾಗ ೭೯೭) - ಮೌನ

ಸ್ಟೇಟಸ್ ಕತೆಗಳು (ಭಾಗ ೭೯೭) - ಮೌನ

ಅಲ್ಲಲ್ಲಿ ಮೌನವನ್ನು ಹುಡುಕಿಕೊಳ್ಳಲು ನಮಗೆ ತಿಳಿದಿರಬೇಕು. ಕಾರಣವೇನೆಂದರೆ ಮಾತು ದಾರಿಯಲ್ಲಿ ಚಲಿಸ್ತಾ ಮೌನಗಳನ್ನು ಚೆಲ್ಲಿರುತ್ತದೆ. ನಾವು ಆಯ್ದುಕೊಂಡು ನಮಗೆ ಬೇಕಾದ ಮೌನವನ್ನು ಮಾತನಾಡುತ್ತಾ ಹೋಗಬೇಕು. ಮೌನವು ನಿಜವಾದ ಮಾತು. ಮೌನ ಯಾರ ಕೈಗೂ ಸಿಕ್ತಾನು ಇಲ್ಲ. ಮೌನಕ್ಕೆ ಈಗ ಬೇಸರವಾಗಿದೆ ಅಂತ ಅಂದುಕೊಳ್ಳುತ್ತೇನೆ ಯಾಕೆಂದರೆ ಹೆಚ್ಚಿನವರು ಮಾತನ್ನೇ ಬಂಡವಾಳ ಮಾಡಿಕೊಂಡು ಮೌನವನ್ನು ಮೂಲೆಗೆ ಸೇರಿಸಿದ್ದಾರೆ. ಹೀಗೆ ಮೂಲೆಗೆ ಸೇರಿದ ಮೌನವು ಹಾಗೆ ದೂರ ಸರಿತಾ ಇದೆ .ನಾವು ಆಗಾಗ ಮೌನವನ್ನು ಧರಿಸಿ ಬಳಸದಿದ್ದರೆ ಮುಂದೆ ಮೌನವೇ ಮಾಯವದೀತು. ಆಗ ಬದುಕು ಇನ್ನಷ್ಟು ಕಷ್ಟವಾದೀತು. ಹಾಗಾಗಿ ಮೌನವನ್ನ ಬಿಡುವುದರ ಬದಲು ಹಾಗೆಯೇ ಬಳಸೋಣ. ಆಗ ಮೌನದ ಬದುಕಿಗೂ ಒಂದಷ್ಟು ಜೀವನದ ಅರ್ಥ ಸಿಕ್ಕಂತಾಗುತ್ತದೆ... ಹಾಗಾಗಿ ಮೌನವನ್ನ ಹುಡುಕಿಕೊಳ್ಳೋಣ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ