ಸ್ಟೇಟಸ್ ಕತೆಗಳು (ಭಾಗ ೮೧೫)- ಹೀಗೊಂದು

ಸ್ಟೇಟಸ್ ಕತೆಗಳು (ಭಾಗ ೮೧೫)- ಹೀಗೊಂದು

ಹೊಯ್ ಸ್ವಾಮಿ, ನಿಮಗೆ ನಾನು ಈ ಊರಿನ ಬಗ್ಗೆ ಹೇಳಲೇ ಇಲ್ಲ ಅಲ್ವಾ? ಆ ಊರನ್ನ ನನಗೆ ಅರ್ಥಮಾಡಿಕೊಳ್ಳೋದಕ್ಕೆ ಆಗ್ಲಿಲ್ಲ. ಅಲ್ಲಿ ಬದುಕೋರು ತುಂಬಾ ಜನ. ಅವರು ಸಣ್ಣ ಪೆಟ್ಟಿಗೆಯೊಳಗಡೆ ಯಾವುದೋ ಒಂದು ಮನೆಯಲ್ಲಿ ನಡೆಯುವ ಘಟನೆಯನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಾರೆ. ಆ ಪೆಟ್ಟಿಗೆಯೊಳಗೆ ಅಂತಲ್ಲ ಕೈಯಲ್ಲಿ ಇರುವ ಸಣ್ಣ ತುಂಡಿನಲ್ಲೂ ಕೂಡ ಅದನ್ನೇ ಗಮನಿಸುತ್ತಾರೆ. ಆ ಸಣ್ಣ ಪೆಟ್ಟಿಗೆ ಒಳಗಡೆ ಬೇರೆ ಬೇರೆ ಮನೆಯ ಒಂದಷ್ಟು ಜನರನ್ನು ಒಂದೇ ಮನೆಯಲ್ಲಿ ಸೇರಿಸಿರುತ್ತಾರೆ.  ಸಣ್ಣಪುಟ್ಟ ವಿಚಾರಕ್ಕೂ ಜಗಳ, ಒಬ್ಬರನ್ನ ಕಂಡರೆ ಒಬ್ಬರಿಗಾಗುವುದಿಲ್ಲ, ನೋಡುವುದಕ್ಕೆ ಅಸಹ್ಯ ಹುಟ್ಟಿಸುವಂತಹ ಕೆಲಸಗಳು, ಒಂದಿನಿತೂ ಉಪಯೋಗವಿಲ್ಲದ ಗಂಟೆಗಟ್ಟಲೆ ಕಾರ್ಯಕ್ರಮ, ಗುಂಪುಗಾರಿಕೆ, ಮೋಸ, ದ್ವೇಷ ,ಅಸೂಯೆ ಎಲ್ಲವನ್ನ ತುಂಬಿಕೊಂಡಿರುವ ಕಾರ್ಯಕ್ರಮ. ಅದನ್ನೇ ಕುಳಿತುಕೊಂಡು ಆಸ್ವಾದಿಸುವಂತಹ ಜನ ಈ ಊರಲ್ಲಿದ್ದಾರೆ. ಯಾರಿಗೂ ಕೂಡ ತಾವೇಕೆ ಆ ಪೆಟ್ಟಿಗೆ ಒಳಗಡೆ ಇಣುಕುತ್ತಿದ್ದೇವೆ ಅನ್ನೋದು ಗೊತ್ತಿಲ್ಲ. ಮರಳು ಮಾಡುತ್ತಿದ್ದಾರೆ, ಮರಳಾಗುತ್ತಿದ್ದಾರೆ, ನೀವಂತೂ ಆ ಊರಿನ ಒಳಗಡೆ ಕಾಲಿಡಲೇಬೇಡಿ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ