ಸ್ಟೇಟಸ್ ಕತೆಗಳು (ಭಾಗ ೮೧೬)- ವ್ಯಾಪಾರಿ

ಸ್ಟೇಟಸ್ ಕತೆಗಳು (ಭಾಗ ೮೧೬)- ವ್ಯಾಪಾರಿ

ಹೀಗೊಂದು ಹುಚ್ಚು ಆಸೆ. ಆ ದಿನ ಬೆಳಗ್ಗೆ ಏಳುವಾಗ ಸಾವಿನ ವ್ಯಾಪಾರಿ ನನ್ನ ಜೊತೆಗೆ ನಿಂತಿರಬೇಕು. ನನ್ನ ಪ್ರತಿದಿನದ ಚಲಿಸುವಿಕೆಯಲ್ಲೋ ಆತ ಬೆನ್ನು ಬಿಡದ ಬೇತಾಳನಂತಿರಬೇಕು. ನನಗೆ ಆಗಾಗ ಸಾವಿನ ಭಯವನ್ನು ತಿಳಿಸುತ್ತಿರಬೆರಕು. ಕ್ಷಣದಲ್ಲಿ ನಾನು ಇಲ್ಲವಾಗಿ ಬಿಟ್ಟರೆ ನನ್ನನ್ನ ಕಳೆದುಕೊಂಡವರು, ನಾನು ಕಳೆದುಕೊಳ್ಳುವವರ ಸ್ಥಿತಿಗತಿಗಳೇನು ಅನ್ನೋದು  ನನಗೆ ಅರಿವಾಗುತ್ತಾ ಹೋಗಬೇಕು. ಹಾಗಾದಾಗ ನಾನು ಪ್ರತಿಯೊಬ್ಬರ ಬಳಿ ವರ್ತಿಸುವ ರೀತಿ ನೀತಿಗಳು ಬದಲಾಗುತ್ತೆ, ಸನ್ನಿವೇಶವನ್ನು ಯೋಚಿಸುವ ರೀತಿ ಅದ್ಭುತವಾಗಿರುತ್ತದೆ, ಜೀವಿಸುವ ಅದ್ಭುತ ಅವಕಾಶ ನನ್ನ ಜೊತೆಗೆ ಇರುತ್ತದೆ. ನನ್ನವರು ಯಾರು ಅನ್ನುವ ಅರಿವು ನನಗಾಗುತ್ತದೆ. ಎಲ್ಲಿ ಹೇಗೆ ಯಾವುದನ್ನ ಬಳಸಬೇಕು ಅನ್ನುವ ಯೋಚನೆಗಳ ಗೂಡುಗಳು ನನ್ನೊಳಗೆ ಭದ್ರವಾಗಿ ಉಳಿಯುತ್ತವೆ. ವರ್ಷಗಟ್ಟಲೆಯ ಆಸೆಗಳಿಗೋಸ್ಕರ ಕೂಡಿ ಇಡುವ ಮನಸ್ಥಿತಿ ಬದಲಾಗಿ ಪ್ರತಿದಿನವನ್ನ ಜೀವಿಸುವ ಮನಸ್ಸು ನನ್ನದಾಗುತ್ತದೆ. ಅಂತಹ ಸಾವಿನ ವ್ಯಾಪಾರಿ ನಮ್ಮ ಜೊತೆಗೆ ಕಣ್ಣಿಗೆ ಕಾಣುವ ಹಾಗೆ ನಡೆಯುತ್ತಿರಬೇಕು. ಹಾಗೆಲ್ಲಾದರೂ ಸಂಭವಿಸಿದರೆ ಅದ್ಭುತವಾದ ಬದಲಾವಣೆಗಳು ಸಾಧ್ಯವಾಗಬಹುದು. ನಾನು ಹೀಗೆ ಹೇಳಿದ್ದೇನೆ ಅನ್ನೋ ಕಾರಣಕ್ಕೆ ಓ ಸಾವಿನ ವ್ಯಾಪಾರಿ ನಾಳೆ ಬಂದು ಪಕ್ಕದಲ್ಲಿ ಕುಳಿತುಕೊಳ್ಳಬೇಡ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ