ಸ್ಟೇಟಸ್ ಕತೆಗಳು (ಭಾಗ ೮೨೩)- ಒಳಗಿನವ

ಒಳಗಿನವನನ್ನು ಸಂತೋಷಪಡಿಸಿದ ಹೊರತು ಹೊರಗೆ ಎಷ್ಟೇ ಸಂಭ್ರಮದ ಮುಖವಾಡವ ಧರಿಸಿ ಎಲ್ಲರ ಜೊತೆಗೆ ಖುಷಿಯ ಹಂಚಿಕೊಂಡರೆ ಏನು ಬಂತು? ಒಳಗಿನವನಿಗೆ ಒಂದಿಷ್ಟು ಆಸೆಗಳಿದ್ದಾವೆ, ಆತನಿಗೆ ಒಂದಷ್ಟು ಜನರ ನಡುವೆ ಗುರುತಿಸಿಕೊಳ್ಳಬೇಕೆಂದಾಸೆ, ತಾನು ಮಾಡುತ್ತಿರುವ ಕೆಲಸಕ್ಕೆ ಗೌರವ ಸಿಗಬೇಕೆಂಬ ಪುಟ್ಟ ಬಯಕೆ, ತನ್ನ ಮನಸ್ಸಿನೊಳಗಿನ ಪ್ರೀತಿಯನ್ನು ಎಲ್ಲರ ಎದುರು ಹೇಳಿ ಅವರಿಂದ ಒಪ್ಪಿಗೆ ಪಡೆಯುವ ಆಸೆ, ತನ್ನ ಕನಸುಗಳನ್ನು ಎಲ್ಲರ ಮುಂದೆ ಹೇಳಿ ಅವರಿಂದ ಒಪ್ಪಿಗೆ ಪಡೆಯುವ ಆಸೆ, ನಾಲ್ಕು ಜನರ ಮುಂದೆ ನಡೆಯುವಾಗ ಆತ ಮಾಡಿದ ಕೆಲಸಕ್ಕೆ ಆತನ ವ್ಯಕ್ತಿತ್ವಕ್ಕೆ ಗೌರವ ಸಿಗಬೇಕೆಂಬ ಆಸೆ, ಆತನ ಶ್ರಮವನ್ನ ಕಂಡು ಶ್ರಮಕ್ಕೆ ತಕ್ಕ ಪ್ರತಿಸಲ ಸಿಗಬೇಕೆನ್ನುವ ಆಸೆ, ಆತ ಸಾಮಾನ್ಯನಲ್ಲ ಎಲ್ಲರಿಗಿಂತ ವಿಶೇಷನಾದವನು ಅನ್ನುವ ಗೌರವ ಸಿಗಬೇಕೆಂಬ ಆಸೆ, ಒಂದಷ್ಟು ಹೊಸ ಹೊಸ ದಾರಿಗಳನ್ನ ಆಯ್ದು ತಂದು ಅವನ ಮುಂದೆ ಇಡಬೇಕೆಂಬ ಆಸೆ, ಹೀಗೆ ಅವನ ಒಳಗಿನ ಪಟ್ಟಿಗಳು ತುಂಬಾ ದೊಡ್ಡದಿದೆ. ಆದರೆ ಅದು ಯಾವುದು ಕೂಡ ಹೊರಗಿನವರಿಗೆ ಗೊತ್ತಾಗುತ್ತಿಲ್ಲ. ಹೊರಗಿನವನು ಅದನ್ನ ಮಾಡೋದಕ್ಕೆ ಸರಿಯಾದ ವ್ಯವಸ್ಥೆಯನ್ನು ನೀಡುತ್ತಾ ಇಲ್ಲ. ಹೀಗಾಗಿ ಒಳಗೆ ಬೇಸರದಲ್ಲಿದ್ದಾನೆ. ಇದನ್ನ ಹೊರಗಿನವನ ಅರ್ಥ ಮಾಡಿಕೊಂಡು ಒಳಗಿನವನ ಆಸೆಗಳನ್ನು ಪೂರೈಸುತ್ತಾ ಸಾಗಬೇಕೋ ಅಥವಾ ಒಳಗಿನವನ ಯೋಚನೆಗಳನ್ನು ಹೊರಗಿನವನು ತನ್ನ ಮುಂದಿರುವವರಿಗೆ ತಿಳಿಸಿ ಅವರಿಂದ ಪಡೆದುಕೊಳ್ಳಬೇಕೋ ಗೊತ್ತಾಗ್ತಾ ಇಲ್ಲ. ಒಳಗಿನವನನ್ನು ಆನಂದದಿಂದ ಇಟ್ಟರೆ ಹೊರಗಿನವನಿಗೆ ಇದೊಂದಷ್ಟು ಹೆಚ್ಚು ಕೆಲಸ ಮಾಡುವುದಕ್ಕೆ ಸ್ಪೂರ್ತಿ ಸಿಕ್ಕಂಗಾಗುತ್ತದೆ. ಅನ್ನೋದು ಅವನ ಅಂಬೋಣ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ