ಸ್ಟೇಟಸ್ ಕತೆಗಳು (ಭಾಗ ೮೨೬)- ಓಡಾಟ

ಸ್ಟೇಟಸ್ ಕತೆಗಳು (ಭಾಗ ೮೨೬)- ಓಡಾಟ

ದೊಡ್ಡ ಮಹಲಿನ ಊರಿನ ತುಂಬಾ ಕನಸುಗಳು ಸಮಸ್ಯೆಗಳು ಪರಿಹಾರಗಳು ಆಸೆಗಳು ಎಲ್ಲವೂ ಓಡಾಡುತ್ತಿರುತ್ತವೆ, ಹೊಸ ಊರಿಗೆ ಬಂದ ಕಾರಣ ಪರಿಚಯಸ್ತರು ಸಿಗುವರೋ ಎನ್ನುವ ಆಸೆಯಲ್ಲಿ ಎಲ್ಲರ ಕಣ್ಣುಗಳನ್ನು ನೋಡುತ್ತಾ ಪಯಣ ಹೊರಟಿದ್ದೆ. ದಾರಿಯ ತುಂಬೆಲ್ಲ ಪರಿಚಯಕ್ಕಿಂತ ಕನಸುಗಳನ್ನು ಹೊತ್ತುವರು ಸಮಸ್ಯೆಗಳ ಸುಳಿಯಲ್ಲಿರುವವರೇ ಕಾಣಸಿಗುವುದಕ್ಕೆ ಆರಂಭವಾದರು. ಒಬ್ಬೊಬ್ಬರ ಕನಸುಗಳು ಒಂದೊಂದು ತೆರನಾಗಿದ್ದವು. ಕೆಲವರದು ಸಣ್ಣದಾದರೆ ಕೆಲವರದ್ದು ಅದ್ಭುತವಾದದ್ದು. ಕೆಲವರದು ವ್ಯರ್ಥವು ಆಗಿತ್ತು. ಒಟ್ಟಿನಲ್ಲಿ ಕನಸುಗಳೇ ಇಲ್ಲದ ಕಣ್ಣುಗಳು ಕಂಡು ಬರಲೇ ಇಲ್ಲ. ಹಾಗಾಗಿ ದೊಡ್ಡ ನಗರಗಳು ಇನ್ನೊಂದಷ್ಟು ದೊಡ್ಡ ನಗರಗಳಾಗುವುದಕ್ಕೆ ಕಾರಣ ಕನಸು. ಮತ್ತು ನಮ್ಮೂರು ಇನ್ನು ದೊಡ್ಡ ಊರಾಗಬೇಕು ಅಂತಿದ್ರೆ ನಮ್ಮೂರಿನಲ್ಲಿ ನಮ್ಮೂರಿನಲ್ಲಿ ಕನಸುಗಳನ್ನ ಬಿತ್ತಬೇಕು. ಕನಸು ಹೊತ್ತವರು ಇನ್ನೊಂದಷ್ಟು ಹೆಚ್ಚಾಗಬೇಕು. ಹಾಗಾಗಿ ದೊಡ್ಡ ಊರಿನಲ್ಲಿ ಕನಸು ಕಾಣುವುದಕ್ಕಿಂತ ನನ್ನೂರಿನಲ್ಲಿ ಕನಸು ಕಂಡು ನನ್ನವರನ್ನು ದೊಡ್ಡ ಊರು ಮಾಡುವ ಆಸೆ ಹೊತ್ತು ದೊಡ್ಡ ಊರನ್ನು ತೊರೆದು ಮತ್ತೆ ನನ್ನೂರಿಗೆ ಮರಳಿದೆ, ಇಲ್ಲಿ ನಾನು ಕನಸನ್ನು ಬಿತ್ತುತ್ತೇನೆ. ಕನಸು ಬಿತ್ತುವ ಮನಸುಗಳಿಗೆ ನೀರಿರೆದು ಕನಸಿನ ಮಹತ್ವ ತಿಳಿಸುತ್ತೇನೆ. ನಿಮ್ಮಲ್ಲಿ ಕನಸುಗಳಿದ್ದರೆ ಒಂದಷ್ಟು ಹಳ್ಳಿಗಳಲ್ಲಿ ಆ ಕನಸುಗಳ ಬೀಜಗಳನ್ನು ಬಿತ್ತಿ ಹಳ್ಳಿಗಳು ದೊಡ್ಡದಾಗುವುದಕ್ಕೆ ಪ್ರಯತ್ನ ಪಡೋಣ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ