ಸ್ಟೇಟಸ್ ಕತೆಗಳು (ಭಾಗ ೮೩೬)- ಭಾರ

ಸ್ಟೇಟಸ್ ಕತೆಗಳು (ಭಾಗ ೮೩೬)- ಭಾರ

ಬದುಕು ಎಲ್ಲರಿಗೂ ಭಾರವಾಗಿರುತ್ತದೆಯಂತೆ, ನನಗೆ ಅದು ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಊರು ತಿರುಗುವ ಕಾರ್ಯಕ್ರಮ ಜೋರಾಗಿ ಇದ್ದುದರಿಂದ ಆ ಊರಿನಲ್ಲಿ ಅವರಿಬ್ಬರನ್ನ ಕಂಡೆ. ದೇಹದಲ್ಲಿ ಅಷ್ಟೇನೂ ಶಕ್ತಿ ಇಲ್ಲದಿದ್ದರೂ ತಮ್ಮ ಶಕ್ತಿಗೆ ಮೀರಿ ದೊಡ್ಡ ದೊಡ್ಡ ಚೀಲಗಳನ್ನು ಹೊತ್ತು ಸಾಗುತ್ತಿದ್ದಾರೆ. ಅವರು ದೇಹ ದಂಡಿಸುತ್ತಾ ಭಾರವನ್ನು ಹೊತ್ತವರಾಗಿದ್ದಾರೆ. ಶಕ್ತಿ ಮೀರಿ ತಲೆಯ ಭಾರವನ್ನು ಹೊರುತ್ತಾ ಮನೆಯ ಬದುಕಿನ ಭಾರವನ್ನು ಹಗುರಾಗಿಸುತ್ತಿದ್ದಾರೆ. ಒಟ್ಟಿನಲ್ಲಿನಭಾರ ಹೆಚ್ಚಾದಷ್ಟು ಬದುಕು ಹಗುರವಾಗುತ್ತಿದೆ. ನನಗೆ ದೇಹ ಹೊತ್ತ ಬಾರಗಳು ಕಾಣುತ್ತಿದ್ದಾವೆ ಹೊರತು ಮನಸು ಹೊತ್ತ ಭಾರಗಳು ಕಾಣಲೇ ಇಲ್ಲ. ನನಗೆ ಕೆಲವೊಂದು ಪರಿಸ್ಥಿತಿಗಳು ಅನುಭವಕ್ಕೆ ಬಂದಾಗ ಮಾತ್ರ ಬದುಕಿನ ಭಾರವಾರಿವಾಯಿತು. ಭಾರವನ್ನು ಭಗವಂತನ ಮೇಲೆ ಇಟ್ಟು ನೆಮ್ಮದಿಯಾಗಿ ಮುಂದೆ ಸಾಗಿ ಅಂತ ಹೇಳುವುದು ಸುಲಭ ಅಷ್ಟು ಸುಲಭಕ್ಕೆ ಭಾರವನ್ನು ದಾಟಿಸುವುದಕ್ಕೆ ಸಾಧ್ಯವಾಗುತ್ತಿದ್ದರೆ ಬದುಕು ತುಂಬಾ ಸುಂದರವಾಗಿರುತ್ತಿತ್ತು ಅಲ್ವಾ? ಬದುಕು ಭಾರವಾಗಿರಬೇಕು, ಬದುಕಿನ ಬಗೆಗಿನ ಭಯ ನಮ್ಮನ್ನ ಬದುಕಿರುವಂತೆ ಮಾಡುತ್ತದೆ. ಇದು ನನ್ನ ನಂಬಿಕೆ ನಿಮ್ಮದು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ