ಸ್ಟೇಟಸ್ ಕತೆಗಳು (ಭಾಗ ೮೩೭)- ಮನೆ

ಸ್ಟೇಟಸ್ ಕತೆಗಳು (ಭಾಗ ೮೩೭)- ಮನೆ

ನೀನು ಈ ಮನೆಯಲ್ಲಿ ಎಷ್ಟು ದಿನದಿಂದ ವಾಸಿಸುತ್ತಿದ್ದೀಯಾ? ನನ್ನ ಪ್ರಕಾರ ತುಂಬಾ ಸಮಯದಿಂದ ನೀನು ಇದೆ ಮನೆಯಲ್ಲಿದ್ದೀಯಾ. ಇಷ್ಟರವರೆಗೂ ಮನೆಯನ್ನು ಬದಲಾಯಿಸಿಲ್ಲ. ಹಾಗಿರುವಾಗ ನಿನ್ನ ಮನೆಯ ಪ್ರತಿಯೊಂದು ಆಗು ಹೋಗುಗಳು ನಿನಗೆ ತಿಳಿದಿರಬೇಕಿತ್ತು. ನಿನಗೆ ನಿನ್ನ ಮನೆಯ ಸುತ್ತಮುತ್ತ ಏನಿದೆ ಅನ್ನೋದರ ಬಗ್ಗೆನೂ ಸರಿಯಾಗಿ ಅರಿವಿಲ್ಲ, ನಿನ್ನ ಮನೆಯ ಒಳಗೆ ಯಾವ ಯಾವ ಭಾಗದಲ್ಲಿ ಯಾವ ಯಾವ ವಸ್ತುಗಳನ್ನ ಹೇಗೆ ಇಟ್ಟಿದ್ದೀಯ ಅನ್ನೋದು ನೆನಪಿಲ್ಲ, ನಿನ್ನ ಮನೆಯ ಛಾವಣಿಗಳು ಎಲ್ಲಿ ಎಲ್ಲಿ ಸೋರುತಿದ್ದಾವೆ, ಎಲ್ಲಿ ಇಲಿ ಹೆಗ್ಗಣಗಳು ಸೇರಿಕೊಂಡಿದ್ದಾವೆ. ಎಲ್ಲಿ ನಿನ್ನ ಮನೆಗೆ ತೊಂದರೆಗಳನ್ನು ಉಂಟು ಮಾಡಲು ವಿವಿಧ ರೀತಿಯ ಕ್ರಿಮಿ ಕೀಟಗಳು ತುಂಬಿಕೊಂಡಿದ್ದಾವೆ ನಿನ್ನ ಮನೆಗೆ ಯಾವ ಭಾಗದಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗಿದ್ದವೇ ಇದ್ಯಾವುದು ನಿನ್ನ ಅರಿವಿಗೆ ಬಂದಿಲ್ಲ. ಆದರೂ ಹಲವು ವರ್ಷದಿಂದ ಈ ಮನೆಯಲ್ಲಿ ಬದುಕುತ್ತಿದ್ದೇನೆ ಅನ್ನುತ್ತೀಯಾ? ಹಾಗಿದ್ದಾಗ ನೀನು ಈ ಮನೆಯ ವಾಸಿ ಎನ್ನುವುದನ್ನು ಹೇಗೆ ಒಪ್ಪಿಕೊಳ್ಳಲು ಆಗುತ್ತೆ. ಯಾರು ಯಾವ ಮನೆಯಲ್ಲಿ ಬದುಕುತ್ತಿರುತ್ತಾರೋ ಅವನಿಗೆ ಆ ಮನೆಯ ಒಳ ಹೊರಗಿನ ಎಲ್ಲ ವಿಚಾರಗಳು ತಿಳಿದಿರಬೇಕು. ಈ ಮನೆಯ ಒಳಗೆ ಬದುಕುವುದಕ್ಕೆ ಯಾವ ರೀತಿಯ ವಾತಾವರಣ ಬೇಕು. ಮನೆಯ ಹೊರಗಿನವರು ಒಳಬರುವುದಕ್ಕೆ ಯಾವ ರೀತಿಯ ಸ್ವಾಗತಬೇಕು ಬಂದವರು ಉಳಿದುಕೊಳ್ಳುವುದಕ್ಕೆ ಪ್ರೀತಿಯಿಂದ ಹೊರಡುವುದಕ್ಕೆ ಹೀಗೆ ಪ್ರತಿಯೊಂದು ತಿಳಿದುಕೊಂಡಿದ್ದಾಗ ಮಾತ್ರ ನೀನು ಮನೆಯೊಳಗಿನವನಾಗ್ತೀಯಾ? ನಿನಗಿದು ಅರ್ಥ ಆಗಿಲ್ಲ ಅನ್ಸುತ್ತೆ ಈ ಮನೆ ಎಂಬ ಮನದೊಳಗೆ ನೀನು ತುಂಬಾ ಸಮಯದಿಂದ ಬದುಕ್ತಾ ಇದ್ದೀಯಾ. ಮನಸ್ಸು ಶುಚಿಯಾಗಿದ್ದಾಗ ಮನದೊಳಗೆ ಬದುಕುವ ಆಸೆಯೂ ಜೀವಂತವಾಗಿರುತ್ತದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ