ಸ್ಟೇಟಸ್ ಕತೆಗಳು (ಭಾಗ ೮೩೮)- ಉತ್ಸವ

ಸ್ಟೇಟಸ್ ಕತೆಗಳು (ಭಾಗ ೮೩೮)- ಉತ್ಸವ

ಅವನು ದೇವರಲ್ಲಿ ಬಂದು ಬೇಡಿಕೊಳ್ಳುತ್ತಾನೆ ತಮಗೆ ಒಳಿತನ್ನು ಮಾಡು ಎಂದಲ್ಲ. ದೇವರೇ ಅದೆಷ್ಟು ದಿನ ಅಂತ ಗುಡಿಯೊಳಗೆ ಇರ್ತೀಯಾ? ವರ್ಷದಲ್ಲಿ ಸಾಧ್ಯವಾದಷ್ಟು ಸಲ ದೇವರಲ್ಲಿ ಉತ್ಸವ ಮೂರ್ತಿಯಾಗಿ ಹೊರಗೆ ಬಾ, ನಿನ್ನನ್ನು ಜನ ಆರಾಧಿಸುವಂತೆ, ನಿನ್ನ ಹೆಸರಿನಲ್ಲಿ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಪಡುವಂತೆ ಮಾಡು ಬಾ ಎಂದು ಬೇಡಿಕೊಳ್ಳುತ್ತಾನೆ. ಹಾಗೆ ಬೇಡಿಕೊಳ್ಳುವುದಕ್ಕೆ ಕಾರಣವಿದೆ. ದೇವರು ಉತ್ಸವ ಮೂರ್ತಿಯಾಗಿ ಹೊರಗೆ ಬಂದಾಗ ಆತನ ಮೆರವಣಿಗೆಗೆ ಸಾಲು ಸಾಲು ತಂಡಗಳು ಹರಿದು ಬರುತ್ತವೆ. ಜನಸಾಗರ ಹೆಚ್ಚಾಗುತ್ತದೆ.ಅಪ್ಪನ ಚುರುಮುರಿ ಅಂಗಡಿಗೆ ,ಮಾವನ ಐಸ್ ಕ್ರೀಮ್ ಅಂಗಡಿಗೆ, ದೊಡ್ಡಪ್ಪನ ಆಟಿಕೆ ಅಂಗಡಿಗಳಿಗೆ ಜನ ಹೆಚ್ಚಾಗಿ ಬರುತ್ತಾರೆ. ಹೆಚ್ಚು ಮಾರಾಟದಿಂದ ದಿನದ ಬದುಕುಗಳು ಬದಲಾಗುತ್ತವೆ. ಹಾಗಾಗಿ ಪ್ರತಿಯೊಂದು ದೇವರ ಬಳಿಯೂ ಇದನ್ನೇ ಬೇಡಿಕೊಳ್ಳುತ್ತಾನೆ. ಇಲ್ಲಿಯವರೆಗೂ ಭಗವಂತ ಆತನ ಇಚ್ಛೆಗಳನ್ನು ಪೂರೈಸಿದ್ದಾನೆ. ಉತ್ಸವಗಳಲ್ಲಿ ದೇವರು ಬೀದಿಗಿಳಿಯುತ್ತಾರೆ, ನಂಬಿದವರ ಬದುಕು ಮನೆಯೊಳಗೆ ಬೆಳಗಲೆಂದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ