ಸ್ಟೇಟಸ್ ಕತೆಗಳು (ಭಾಗ ೮೪೦)- ಮರ

ಸ್ಟೇಟಸ್ ಕತೆಗಳು (ಭಾಗ ೮೪೦)- ಮರ

ಮನೆಯ ಅಂಗಳದಲ್ಲಿ ಬೀಜ ಒಂದನ್ನು ತಂದು ದೊಡ್ಡ ಮರವಾಗುವ ಯೋಚನೆಯಿಂದ ನೆಟ್ಟಿದ್ದರು. ಅದಕ್ಕೆ ಕಾಲಕಾಲಕ್ಕೆ ಸರಿಯಾದ ನೀರು, ಗೊಬ್ಬರ ಎಲ್ಲವನ್ನು ಹಾಕಿದ್ದರು, ಕೆಲವು ದಿನ ಮರೆತಿದ್ದರೂ ಕೂಡ ಆ ಬೀಜ ನಿಧಾನವಾಗಿ ಬೇರುಗಳನ್ನು ಇಳಿಸಿ ಎಲೆಗಳನ್ನು ಬಿಡುತ್ತಾ ಎತ್ತರಕ್ಕೆ ಎತ್ತರಕ್ಕೆ ಏರಿ ಕಾಲಕಾಲಕ್ಕೆ ಬದಲಾವಣೆಗಳಿಗೆ ಒಗ್ಗಿಕೊಂಡು ಮರವಾಗಿ ಹೂವಾಗಿ ಹಣ್ಣಾಗಿ ತನ್ನ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿತು. ಆ ಮನೆಯ ಯಜಮಾನ ದಿನದಲ್ಲಿ ಹೆಚ್ಚು ಸಲ ಆ ಮರದ ಬುಡದ ಬಳಿ ಅವರು ಕಾಲ ಕಳೆದರು. ಅದರ ಜೊತೆಗೆ ಮಾತುಕತೆ ಅದರ ಜೊತೆಗೆ ಬಾಂಧವ್ಯ ಗಟ್ಟಿಯಾಗಿತ್ತು. ಮನೆಯಲ್ಲಿ ಯಾರು ಇಲ್ಲ ಅಂತಲ್ಲ. ಎಲ್ಲ ವಿಚಾರಗಳನ್ನ ಕಾಲಕಾಲಕ್ಕೆ ಸದ್ವಿಚಾರಗಳನ್ನ ಕ್ರಮವಾಗಿ ನೀಡಿದ ಮಗನು ಸ್ವಂತ ಕಾಲ ಮೇಲೆ ನಿಲ್ಲಲಿಲ್ಲ. ತನ್ನ ಹೆಸರನ್ನು ತಾನೇ ಉಳಿಸಿಕೊಳ್ಳಲಿಲ್ಲ. ಸಮಾಜದಲ್ಲಿ ಅಪ್ರಯೋಜಕ ಅನ್ನಿಸಿಕೊಂಡ. ತಾನು ಪಡೆದ ಗೊಬ್ಬರ ನೀರಿಗೆ ಪ್ರತಿಫಲವಾಗಿ ಮರ ಹೂವು ಹಣ್ಣುಗಳನ್ನು ನೀಡುವುದಕ್ಕೆ ಹೊರಟ್ರೆ ತಂದೆಯಿಂದ ಪಡೆದ ಸಂಸ್ಕಾರದಿಂದ ಕಿಂಚಿತ್ತು ಉಪಯೋಗ ಪಡೆದುಕೊಳ್ಳದ ಮಗ ವ್ಯರ್ಥವಾಗಿ ಭಾರವಾಗ್ತಾ ಹೋದ. ಹಾಗಾಗಿ ಆ ಹಿರಿಯ ಜೀವ ಕಣ್ಣೀರುಳಿಸುತ್ತಾ ಮರದ ಬಳಿ ಕುಳಿತು ತನ್ನ ವೇದನೆಯನ್ನು ಕೇಳಿಕೊಳ್ಳುತ್ತಿದ್ದರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ