ಸ್ಟೇಟಸ್ ಕತೆಗಳು (ಭಾಗ ೮೪೬)- ಅಹಂಕಾರ

ಸ್ಟೇಟಸ್ ಕತೆಗಳು (ಭಾಗ ೮೪೬)- ಅಹಂಕಾರ

ತಲೆ ಮೇಲಕ್ಕೆ ಇರೋದ್ದಕ್ಕೆ ಏನೋ ಅಹಂಕಾರ ಅನ್ಮೋದು ಆಗಾಗಾ ಬಂದು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿತ್ತು ನನ್ನ ತಲೆಯಲ್ಲಿ. ಮನೆಯಲ್ಲಿ ಮಲೋಗದ್ದಕ್ಕೆ ಅಮ್ಮ ಯಾವುದಾದರೂ ಹೊದಿಕೆ ತಂದು ಕೊಟ್ಟಗ ಅದರಲ್ಲಿ ತುಂಬಾ ಆಯ್ಕೆ ಮಾಡಿ ತುಂಬಾ ಸುಂದರವಾಗಿರೋದ್ದನ್ನ ನನಗೆ ಇಷ್ಟವಾಗಿರೋದ್ದನ್ನ ಮಾತ್ರ ತೆಗೆದುಕೊಳ್ತಿದ್ದೆ. ಕೆಲವೊಂದು ಹೊದಿಕೆಗಳನ್ನ ಹತ್ತಿರವೂ ಸೇರಿಸ್ತಿರ್ಲಿಲ್ಲ. ಅವು  ತುಂಬಾ ಸಮಯದಿಂದ ನನ್ನ ಕೊಠಡಿಯೊಳಗೆ ಹಾಗೇ ಒಂಟಿಯಾಗಿ ಉಳಿದುಬಿಟ್ಟಿದ್ದವು. ಆದರೆ ಆ ಒಂದು ದಿನ ಇನ್ನೊಂದು ಊರಿಗೆ ಹೊರಡುವ ಸರದಿ ಬಸ್ಸನ್ನೇರಿಯಾಗಿತ್ತು. ರಾತ್ರಿ ತುಂಬಾ ಚಳಿ ಇದ್ದ ಕಾರಣ ಹೊದ್ದುಕೊಳ್ಳುವುದಕ್ಕೆ ಹೊದಿಕೆಯನ್ನು ಹುಡುಕಿದಾಗ ನಾನು ಇಷ್ಟು ದಿನದವರೆಗೆ ಯಾವುದನ್ನು ಬೇಡ ಅಂದುಕೊಂಡಿದ್ದೇನೊ ಅದುವೇ ನನ್ನ ಪೆಟ್ಟಿಗೆ ಒಳಗಡೆ ಸ್ಥಾನ ಪಡೆದುಕೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಹೊದ್ದುಕೊಂಡಾಯಿತು, ಚಳಿಯು ದೂರವಾಯಿತು. ನೆಮ್ಮದಿಯ ನಿದ್ದೆಯೂ ಬಂತು. ಅಮ್ಮ ತುಂಬಾ ಸಲ ಹೇಳಿದ್ದರು ಎಲ್ಲವೂ ಬಳಕೆಗೆ ಬರುತ್ತದೆ. ಅದು ನಮ್ಮ ಅರಿವಿಗೆ ಸಿಲುಕ ಬೇಕಷ್ಟೇ ಅಂತ. ಅದು ನನಗೆ ಅರ್ಥ ಆಗಬೇಕಾದಾಗ ಒಂದಷ್ಟು ಸಮಯ ಆಗಿತ್ತು. ಅಹಂಕಾರ ಒಂದಷ್ಟು ಕಡಿಮೆ ಆಯಿತು. ಪ್ರತಿ ವಸ್ತುಗಳಿಗೂ ಮೌಲ್ಯ ಇದ್ದೇ ಇರುತ್ತದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ