ಸ್ಟೇಟಸ್ ಕತೆಗಳು (ಭಾಗ ೮೫೭)- ಹಾರುವ ಮಂಗ

ಸ್ಟೇಟಸ್ ಕತೆಗಳು (ಭಾಗ ೮೫೭)- ಹಾರುವ ಮಂಗ

ಆ ಮರದಲ್ಲಿ ತುಂಬಾ ಹಣ್ಣುಗಳು. ಆ ಮರ ತುಂಬಾ ಹಣ್ಣುಗಳನ್ನು ಬಿಡ್ತಾ ಇತ್ತು. ಅಲ್ಲಿ ಅದೊಂದೇ ಮರವಲ್ಲ ಅಂತಹ ಕೆಲವಾರು ಮರಗಳು ಆ ಸ್ಥಳದಲ್ಲಿದ್ದವು. ಆ ಹಣ್ಣುಗಳನ್ನು ತಿನ್ನೋದಕ್ಕಂತಲೇ ಮಂಗಗಳು ವಾಸವಾಗಿದ್ದವು. ಆದರೆ ಮಂಗಗಳಿಗೆ ಯಾವ ಮರವನ್ನು ನಿಗದಿಪಡಿಸುತ್ತಾರೋ ಅದೇ ಮರದಿಂದ ಹಣ್ಣುಗಳನ್ನು ಕೊಯ್ಯಬೇಕು ತಿನ್ನಬೇಕು. ಇನ್ನೊಂದು ಮರದ ಕಡೆಗೆ ಹೋಗುವ ಹಾಗಿಲ್ಲ ಹಾಗಾಗಿ ಪ್ರತಿ ಮರಕ್ಕೆ ಇಂತಿಷ್ಟು ಮಂಗಗಳು ಎನ್ನುವ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಕೆಲವೊಂದು ಮಂಗಗಳು ಮರಗಳೇ ಹಣ್ಣು ಕೊಡುತ್ತಿದ್ದರೂ ಸಹ ತಮ್ಮಿಂದಾಗಿ ಈ ಮರದಲ್ಲಿ ಹಣ್ಣು ಬಿಡುತ್ತಿದೆ ಅನ್ನುವ ಅಹಂಕಾರದಲ್ಲಿದ್ದವು. ಕಾಲಕಾಲಕ್ಕೆ ಬದಲಾವಣೆ ಅನಿವಾರ್ಯವಾದ ಕಾರಣ ಕೆಲವೊಂದು ಮಂಗಗಳಿಗೆ ನೀವು ಒಂದಷ್ಟು ಸಮಯ ಸಿಕ್ಕ ಹಣ್ಣುಗಳನ್ನು ತಿನ್ನುತ ಇನ್ನೊಂದಷ್ಟು ಪ್ರದೇಶವನ್ನು ಸುತ್ತಾಡ್ತಾ ಬದುಕಿ ಹೊಸ ಸಣ್ಣ ಮಂಗಗಳಿಗೆ ಈ ಮರದಲ್ಲಿ ಬದುಕುವ ಅವಕಾಶ ಸಿಗಲಿ ಅನ್ನುವಂತಹ ನಿರ್ಧಾರವು ಮಾಡಲಾಯಿತು. ಆದರೆ ಹಣ್ಣುಗಳನ್ನು ನಂಬಿದ್ದ ಕೆಲವೊಂದು ಮಂಗಗಳಿಗೆ ಸ್ವಂತ ಮರವಿಲ್ಲದೆ ಬದುಕೋದು ಹೇಗೆ ಅದು ಕಷ್ಟ ಅಂತ ತಿಳಿದು ಇನ್ನೊಂದು ಮರಕ್ಕೆ ಹಾರಿಬಿಡ್ತು. ಅಲ್ಲಿ ಒಂದಷ್ಟು ಸಮಯ ಹಣ್ಣುಗಳನ್ನು ತಿನ್ನುತ್ತ ತನ್ನದೇ ರಾಜ್ಯಭಾರವನ್ನು ನಡೆಸುತ್ತಾ ಅಲ್ಲಿ ತನಗೆ ಯಾರೂ ಗೌರವ ಕೊಡ್ತಾ ಇಲ್ಲ ಅನ್ನೋದು ಅರಿವಾಗಿ ಮತ್ತೆ ತನ್ನ ಮೊದಲಿದ್ದ ಮರದ ಬಳಿ ಬಂದು ಬೇಡಿಕೊಳ್ಳುತ್ತಾ ನಾನು ಮತ್ತಿದೇ ಮರದ ಜೊತೆಗೆ ಬದುಕುತ್ತೇನೆ ನನಗೆ ಸಿಕ್ಕ ಹಣ್ಣುಗಳು ಸಾಕು ಅಂತ ಇದೇ ಮರವನ್ನು ಆಶ್ರಯಿಸಿಕೊಳ್ಳುತ್ತದೆ. ಮಂಗಗಳಿಗೆ ಅರಿವಾಗಬೇಕು ತಮ್ಮ ಸ್ಥಾನ ಎಲ್ಲಿ, ನಾವು ಒಂದಷ್ಟು ಸ್ವತಂತ್ರವಾಗಿ ಬದುಕಬೇಕು, ಮರವನ್ನೇ ಆಶ್ರಯಿಸಿದ್ದು ಸಾಕು. ಹೊಸ ಮಂಗಗಳಿಗೂ ಅವಕಾಶ ಸಿಗಲಿ ಈ ಆಲೋಚನೆಗಳು ಬಂದುಬಿಟ್ಟರೆ ಮಂಗಗಳಿಗೂ ಒಂದಷ್ಟು ಮರ್ಯಾದೆ ಸಿಗುತ್ತೆ. ಇಲ್ಲವಾದರೆ ಇನ್ನೊಂದಷ್ಟು ಮರಗಳನ್ನು ಹುಡುಕುವ ಅವಶ್ಯಕತೆಯೂ ಬರುತ್ತೆ. ಎಲ್ಲಾ ಮಂಗಗಳೂ ತಮ್ಮ ಲಾಭ ನೋಡಿಕೊಳ್ಳುತ್ತವೆ ಹೊರತು ಮರದ್ದಲ್ಲ, ನೆಲದ್ದಲ್ಲ. ಮಂಗಗಳ ಕತೆ ನಿಮಗೆ ಅರ್ಥವಾಗಿದೆ ಅಂದುಕೊಳ್ಳುತ್ತೇನೆ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ