ಸ್ಟೇಟಸ್ ಕತೆಗಳು (ಭಾಗ ೮೬೧)- ಹುಡುಕಾಟ

ಸ್ಟೇಟಸ್ ಕತೆಗಳು (ಭಾಗ ೮೬೧)- ಹುಡುಕಾಟ

ಅವನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅವನಿಂದ ಸಾದ್ಯವಾಗುತ್ತೆ ಅಂತನೂ ನಂಬಿದ್ದಾರೆ. ಅವನ ಬಗ್ಗೆ ಅವರಿಗೆ ವಿಪರೀತ ನಂಬಿಕೆ ಇದೆ. ಅವರು ಅವನ ಬಗ್ಗೆ ಹಲವಾರು ಕನಸುಗಳನ್ನ ಕಂಡಿದ್ದಾರೆ. ಆದರೆ ಅವನಿಗೆ ಅವನ ಬಗ್ಗೆ ಸ್ವತಃ ನಂಬಿಕೆ ಇಲ್ಲದೆ ಹಲವು ಸಮಯದಿಂದ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಪರದಾಡಿಕೊಳ್ಳುತ್ತಾ ಇದ್ದಾನೆ. ವಿವಿಧ ರೀತಿಯ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಂಡು ಪರೀಕ್ಷಿಸುತ್ತಲೇ ಇದ್ದಾನೆ. ಎಷ್ಟು ಸಮಯದವರೆಗೆ ಈ ಪ್ರಯತ್ನಾ ತಿಳಿಯುತ್ತಾ ಇಲ್ಲ. ಕೊನೆಯಿಲ್ಲದ ಪ್ರಯತ್ನವಾದರೆ ಕೊನೆಗೆ ತಲುಪುವುದೆಲ್ಲಿಗೋ ಅದೂ ತಿಳಿಯುತ್ತಿಲ್ಲ. ತನ್ನ ಸುತ್ತಲಿನವರು ಕಂಡ ಕನಸುಗಳೆಲ್ಲಾ ತನ್ನದೋ ಅಥವಾ ತಾನು ಕಾಣಲು ಪರದಾಡುತ್ತಿರುವ  ಕನಸು ತನ್ನದೋ ಯಾವುದನ್ನು ಒಪ್ಪಿಕೊಳ್ಳೋದು ಅರಿಯದೇ ಆತನಿನ್ನೂ ಕೂಡಾ ಹುಡುಕುತ್ತಲೇ ಇದ್ದಾನೆ. ಪ್ರಯತ್ನ ಪಡುವುದೋ ಅಥವಾ ಉಳಿದವರದ್ದನ್ನ ಒಪ್ಪಿಕೊಳ್ಳೋದೋ ಗೊತ್ತಾಗುತ್ತಿಲ್ಲ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ