ಸ್ಟೇಟಸ್ ಕತೆಗಳು (ಭಾಗ ೮೬೭)- ಜನಸ್ತೋಮ

ಸ್ಟೇಟಸ್ ಕತೆಗಳು (ಭಾಗ ೮೬೭)- ಜನಸ್ತೋಮ

ಅಲ್ಲೊಂದು ಜನ ಸಾಗರವೇ ತುಂಬಿಕೊಂಡಿದೆ. ಆದರೆ ಅದೊಂದು ಸಾಧನೆ ಅನ್ನೋದು ಕೂಡ ಅಷ್ಟಾಗಿ ನನಗೆ ಅರಿವಿಲ್ಲ. ಅಲ್ಲಿ ಅವರ ಹಿಂದೆ ಮುಂದೆ ಸುತ್ತಾ ಮುತ್ತಾ ಸೇರಿದ ಜನರನ್ನು ನೋಡಿದರೆ ಆತನೇನೋ ದೇಶಕ್ಕೆ ಅದ್ಭುತವಾದದ್ದನ್ನ ನೀಡಿದ್ದಾನೆ ಅನ್ನುವ ಯೋಚನೆ. ಆತನಿಗೆ ಮಾಲೆಗಳು ಸಾಲು ಸಾಲಾಗಿ ಬಂದು ಬೀಳುತ್ತಿವೆ. ಗಾಡಿಯ ಮೇಲೆ ನಿಂತು ಜನರ ಕಡೆಗೆ ಕೈಬೀಸುತ್ತಿದ್ದಾನೆ. ಸೇರಿದ ಜನ ಕೂಗುತ್ತಿದ್ದಾರೆ ಆತನೆಡೆಗೆ ಕೈಬೀಸುತ್ತಿದ್ದಾರೆ. ಆತ ತಮ್ಮನ್ನು ಗಮನಿಸುತ್ತಿದ್ದಾನೆ ಎನ್ನುವ ಭ್ರಮೆಯಲ್ಲಿ. ಆತ ಇತ್ತೀಚೆಗೆ ಟಿ ವಿಯ ಕಾರ್ಯಕ್ರಮವೊಂದರಲ್ಲಿ ಗೆಲುವು ಪಡೆದವ. ಹಾಗೆಯೇ ಗಾಡಿಯು ಅವರ ಮನೆಯ ಮುಂದೆಯೇ ಹಾದು ಹೋಯಿತು. ಹಾ ಅವರು ಹೇಳಿದ್ನಲ್ಲ ಅವನು ಇತ್ತೀಚೆಗೆ ದೇಶವನ್ನು ಪ್ರತಿನಿಧಿಸಿ ಚಿನ್ನದ ಬಹುಮಾನವನ್ನು ಈ ದೇಶಕ್ಕೆ ಕೊಡುಗೆಯಾಗಿ ತಂದವ. ಹಲವು ವರ್ಷಗಳಿಂದ ಪ್ರತಿದಿನವೂ ಪರಿಶ್ರಮಪಟ್ಟು ಇಡೀ ವಿಶ್ವದ ಮುಂದೆ ದೇಶದ ಹೆಸರನ್ನ ಅಚ್ಚೊತ್ತಿದ್ದವ. ಆದರೆ ಆತ ಗೆದ್ದು ಬಂದಾಗ ಮನೆಯವರನ್ನು ಬಿಟ್ಟು ಬೇರೆ ಯಾರು ಸ್ವಾಗತಿಸುವುದಕ್ಕೆ ಇರಲಿಲ್ಲ. ಆತನ ಪಕ್ಕದ ಮನೆಯವನಿಗೂ ಈತನ ಬಗ್ಗೆ ಗೊತ್ತಿಲ್ಲ. ಆತನ ಸಂಭ್ರಮವನ್ನು ಕಂಡು ಹಾಗೆಯೇ ಕಣ್ಣಲ್ಲಿ ಕಣ್ಣೀರನ್ನು ತುಂಬಿಕೊಂಡು ಒಳಕ್ಕೆ ನಡೆದು ಬಿಟ್ಟ. ಮರುದಿನ ಅಭ್ಯಾಸಕ್ಕೆ ಅಣಿಯಾಗಲು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ