ಸ್ಟೇಟಸ್ ಕತೆಗಳು (ಭಾಗ ೮೭೮)- ಬೇಡಿಕೆ

ಸ್ಟೇಟಸ್ ಕತೆಗಳು (ಭಾಗ ೮೭೮)- ಬೇಡಿಕೆ

ಪುಟ್ಟ ವೇದಿಕೆಯಲ್ಲಿ ಪುಟ್ಟ ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳ ನಡುವೆ ಕಲ್ಮಶವಿಲ್ಲ. ಎಲ್ಲರ ರಂಜನೆಗೆ, ಮನದ ಆಹ್ಲಾದನೆಗೆ ಮನಸ್ಸಿನಿಂದ ನಲಿಯುತ್ತಿವೆ. ಬಣ್ಣಗಳ ಒಳಗೆ ಯಾವುದೇ ಕೃತಕತೆ ಸೇರಿಲ್ಲ. ನೋಡುಗರ ಕಣ್ಣಲ್ಲಿ ಹಲವು ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳು ಹಾಗೇ ಉಳಿದಿರುವ ಕೆಲವು ದಿನಗಳಷ್ಟೇ ಉಳಿದಿವೆ. ಇಲ್ಲಿರುವ ಕಲಬೆರಕೆಗಳ ನಡುವೆ ಆ ಬಣ್ಣಗಳು ಕರಗಿ ಹೋಗಬಾರದಷ್ಟೇ. ಹೊರಗೆ ಕುಳಿತ ಈಗಾಗಲೇ ಬಣ್ಣದ ಮೂಲ ಸತ್ವ ಕಳೆದುಕೊಂಡ, ತಾವೇ ಉತ್ಕೃಷ್ಟ ಬಣ್ಣಗಳೆಂದು ಅಂದುಕೊಳ್ಳುತ್ತಿರುವ ಬಣ್ಣಗಳು ಪುಟ್ಟ ಬಣ್ಣಗಳನ್ನ ತಮ್ಮಂತೆ ಮಾಡದಿದ್ದರೆ ಸಾಕು. ವೇದಿಕೆ ಮೇಲೆ ಕುಣಿದ ನಡೆದ ಪುಟ್ಟ ಬಣ್ಣಗಳನ್ನು ನಿರ್ದಿಗಂತದಲ್ಲಿ ಹಾರಲು ಬಿಟ್ಟರೆ ಅವು ಇನ್ನಷ್ಟು ವಿಶಾಲವಾಗಿ ಕರಗುತ್ತವೆ. ಹಾಗೆ ಕಾಲಕ್ಕೆ ಬಣ್ಣವಿಲ್ಲ ಆ ಕಾಲದೊಳಗೆ ಪುಟ್ಟ ಬಣ್ಣಗಳು ಕರಗಿ ಹೋಗದಿದ್ದರೆ ಸಾಕು ದೇವಾ, ಬೇಡಿಕೆ ಇಷ್ಟೇ, ನಿನ್ನಲ್ಲಿ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ