ಸ್ಟೇಟಸ್ ಕತೆಗಳು (ಭಾಗ ೮೮೪)- ಅಯ್ಯೋ

ಸ್ಟೇಟಸ್ ಕತೆಗಳು (ಭಾಗ ೮೮೪)- ಅಯ್ಯೋ

ನೋಡಿ ನಮ್ಮ ಸಮಾಜ ಹಾಳಾಗಿದೆ, ಮೊದಲಿನ ಹಾಗೆ ಏನು ಇಲ್ಲ. ಈ ಸಿಕ್ಕಾಪಟ್ಟೆ  ರೀಲ್ಸ್ ಗಳನ್ನು ಮಾಡಿಕೊಂಡು ಯಾರದು ಮಾತುಗಳಿಗೆ ತಾವು ತುಟಿಯಲ್ಲಾಡಿಸುತ್ತಾ ಯಾವುದೋ ಹಾಡಿಗೆ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿಯುತ್ತ  ಕ್ಷಣದಲ್ಲಿ ಪ್ರಸಿದ್ಧಿಗೆ ಬರಬೇಕು ಅನ್ನೋ ತೆವಲಿಗೆ ಬಿದ್ದು ಹಾಳಾಗುತ್ತಿದ್ದಾರೆ. ಆದ್ರೆ ಇವರಿಗೆ ಒಂದು ದಿನವೂ ಅರ್ಥ ಆಗ್ಲಿಲ್ಲ. ನಮ್ಮ ಊರಿನಲ್ಲಿ ಸಾವಿರ ಸಮಸ್ಯೆಗಳಿವೆ, ಸರಕಾರವು ಬದಲಿಸಬೇಕಾದ ಹಲವಾರು ರೀತಿಗಳಿವೆ, ಜನರು ಅನುಭವಿಸುವ ತೊಂದರೆಗಳಿವೆ. ಅವನು ಒಂದು ದಿನವೂ ವಿಡಿಯೋ ಮಾಡಿ ಸರಕಾರಕ್ಕೆ ತಲುಪಿಸುವ ಕೆಲಸ ಮಾಡಿಲ್ಲ. ಸ್ವಂತಕ್ಕೇನು ಮಾಡದೆ, ಸಮಾಜಮುಖಿಯಾಗಿ ಯೋಚಿಸದೆ ಬರಿಯ ಹಾಡುಗಳು ಫೋಟೋಗಳನ್ನ ತೆಗೆಯುತ್ತಾ ಸ್ವಪ್ರಸಿದ್ಧಿಯನ್ನೇ ಬಯಸುವವರು ಹೆಚ್ಚಾಗಿದ್ದಾರೆ. ಇದು ಬದಲಾದಾಗ ಮಾತ್ರ ಊರು ಅಭಿವೃದ್ಧಿಯಾಗುತ್ತದೆ. ನಾನೊಬ್ಬನೇ ಎಷ್ಟು ಅಂತ ಹೀಗೆ ಯೋಚನೆ ಮಾಡುವುದು. ಬನ್ನಿ ನನ್ನ ಜೊತೆ ಕೈಜೋಡಿಸಿ" ಹೀಗೆಂದು ಮಾತನಾಡಿದವ ಕ್ಷಣದ ಸ್ವಲ್ಪ ದೂರ ಹೋಗಿ ಉತ್ತಮವಾದ ಸ್ಥಳಾವಕಾಶವನ್ನು ನೋಡಿ ಹೊಸತೊಂದು ಹಾಡಿಗೆ ರೀಲ್ಸ್  ಮಾಡೋದಕ್ಕೆ ಆರಂಭ ಮಾಡಿದನಂತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ