ಸ್ಟೇಟಸ್ ಕತೆಗಳು (ಭಾಗ ೮೮೯)- ಕಾರಣ ನೀನಾ?

ಸ್ಟೇಟಸ್ ಕತೆಗಳು (ಭಾಗ ೮೮೯)- ಕಾರಣ ನೀನಾ?

ನೀನೇನಾದರೂ ಕಾರಣವಾದೆಯಾ? ಈ ಪ್ರಶ್ನೆಯನ್ನ ಆಗಾಗ ನೀನು ಕೇಳಿಕೊಳ್ಳುತ್ತಾನೆ ಇರಬೇಕು, ಜೊತೆಯಾಗಿದ್ದ ಇಬ್ಬರು ಗೆಳೆಯರು ಕೆಲವು ದಿನದಿಂದ ದೂರವಾಗಿದ್ದಾರೆ ಅದಕ್ಕೆ ನೀನೇನಾದ್ರೂ ಕಾರಣವಾದೆಯಾ? ಗಟ್ಟಿಯಾಗಿದ್ದ ತಂಡದ ನಡುವೆ ಒಂದಷ್ಟು ಬಿರುಕುಗಳು ಕಾಣಿಸಿಕೊಳ್ಳುವುದ್ದಕ್ಕೆ ಆರಂಭವಾಗಿದೆ ಅದಕ್ಕೆ ನೀನೇನಾದರೂ ಕಾರಣವಾಗಿದ್ದೀಯಾ? ನಗುತ್ತಿದ್ದವರ ಮುಖದಲ್ಲಿ ನೋವು ಕಾಣಿಸುತ್ತಿದೆ, ಪ್ರೀತಿ ಮಾಡುತ್ತಿದ್ದವರು ದ್ವೇಷ ಕಾರುತ್ತಿದ್ದಾರೆ, ಅಕ್ಕಪಕ್ಕದ ಮನೆಯವರು ಬಾಗಿಲು ಹಾಕಿಕೊಂಡಿದ್ದಾರೆ, ದಿನವೂ ಖುಷಿಯಿಂದ ಮಾತನಾಡುತ್ತಿದ್ದವನ ಮನಸ್ಸಲ್ಲಿ ಕೆಟ್ಟ ಆಲೋಚನೆಗಳು ಹೆಚ್ಚಾಗಿದೆ, ಎಲ್ಲರಿಗೂ ಸಹಾಯ ಮಾಡುತ್ತಿದ್ದವ ಸ್ವಾರ್ಥಿಯಾಗಿದ್ದಾನೆ, ನಂಬಿದವರು ಕಣ್ಣೀರಿಡುತ್ತಿದ್ದಾರೆ, ಇತರರ ಬಗ್ಗೆ ತಪ್ಪು ಮಾತುಗಳನ್ನಾಡುತ್ತಿದ್ದಾರೆ, ಮೌನಾವಾಗಿ ಅಲ್ಯಾರೋ ಕಣ್ಣೀರು ಇಳಿಸುತ್ತಿದ್ದಾರೆ, ಈ ಎಲ್ಲದಕ್ಕೂ ನೀನೇನಾದರೂ ಕಾರಣವಾಗಿದ್ದೀಯಾ? ಹಾಗಿದ್ದರೆ ನಿನ್ನನ್ನು ನೀನು ತಿದ್ದಿಕೊಳ್ಳಲೇಬೇಕು. ನಿನ್ನ ಕಾರಣದಿಂದ ಇತರರ ಬದುಕು ಕೆಳಗಿಳಿಯುವಂತಾಗಬಾರದು, ನೋವನುಭವಿಸಬಾರದು. ಅರ್ಥವಾಯಿತಾ? ಕೆಲಸಕ್ಕೆ ಹೊರಡುವಾಗ ಅಪ್ಪ ಹೇಳಿದ ಮಾತು ಆಗಾಗ ನನ್ನನ್ನು ಎಚ್ಚರಿಸ್ತಾನೆ ಇರುತ್ತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ