ಸ್ಟೇಟಸ್ ಕತೆಗಳು (ಭಾಗ ೮೯೮)- ಎಚ್ಚರಿಕೆ

ಸ್ಟೇಟಸ್ ಕತೆಗಳು (ಭಾಗ ೮೯೮)- ಎಚ್ಚರಿಕೆ

ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ. ಕೆಲವೊಂದು ಸಲ ದಾರಿಗಳು ತಪ್ಪಿರುತ್ತದೆ, ಹೋಗುವ ವೇಗ ಕಡಿಮೆ ಆಗ್ತಾ ಹೋಗುತ್ತೆ, ಸಮಯ ಕಳೆಯೋಣ ಅಂತ ಅನಿಸುವುದ್ದಕ್ಕೆ ಆರಂಭ ಆಗುತ್ತೆ, ಹೀಗಿರುವಾಗ ಭಗವಂತ ನೀಡಿದ ವಿಳಾಸವನ್ನು ನಾವು ತಲುಪಲೇ ಬೇಕು ಅನ್ನೋ ಕಾರಣಕ್ಕೆ ದಾರಿ ಎಚ್ಚರಿಕೆಗೆ ಯಾರನ್ನೋ ಭಗವಂತ ಕಳುಹಿಸುತ್ತಾನೆ. ಅವರು ಆಗಾಗ ಒಂದೊಂದು ರೂಪದಲ್ಲಿ ಬಂದು ಎಚ್ಚರಿಸುತ್ತಾನೆ ಇರುತ್ತಾರೆ. ಕೊಟ್ಟ ಎಚ್ಚರಿಕೆಯನ್ನು ಸರಿಯಾಗಿ ತೆಗೆದುಕೊಂಡರೆ ಭಗವಂತ ಕೊಟ್ಟ ವಿಳಾಸವನ್ನು ತಲುಪಬಹುದು... ಇಲ್ಲದಿದ್ದರೆ  ತಪ್ಪು ದಾರಿಯಲ್ಲಿ ಜೀವನಪೂರ್ತಿ ಅಲೆದಾಡುತ್ತಾನೆ ಇರಬೇಕಾಗುತ್ತೆ.  ಎಚ್ಚರಿಸುವವರು ಬೇಕಾಗುತ್ತಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ