ಸ್ಟೇಟಸ್ ಕತೆಗಳು (ಭಾಗ ೯೦೩)- ನೀರು

ಸ್ಟೇಟಸ್ ಕತೆಗಳು (ಭಾಗ ೯೦೩)- ನೀರು

ಆ ಅಜ್ಜ ಹಲವು ಬಾರಿ ಎಲ್ಲಿ ಎಲ್ಲಾ ಸಾಧ್ಯ ಇದೆಯೋ ಅಲ್ಲಿ ಎಲ್ಲಾ ಕಡೆಯೂ ಬೇಡಿಕೊಂಡಿದ್ದ. ಬೇಡಿಕೆ ಇಟ್ಟಿದ್ದ. ಮುಂದಾಗುವ ಅನಾಹುತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಯಾರೂ ಕೂಡ ಕೇಳಲೇ ಇಲ್ಲ. ಆತ ಹೇಳಿದ್ದ ಮಳೆಯ ಹನಿ ಭೂಮಿಗೆ ಬೀಳುವ ಕ್ಷಣದಲ್ಲಿ ಅದನ್ನು ನಿಲ್ಲಿಸುವ ಯೋಚನೆ ಮಾಡಿ. ಇಲ್ಲವಾದರೆ ಮುಂದೊಂದಿನ ಹನಿ ನೀರನ್ನು ಹುಡುಕುತ್ತಾ ಅಲೆದಾಡ ಬೇಕಾಗುತ್ತೆ ಅಂತ. ಆದರೆ ಜನ ಯೋಚನೆ ಮಾಡ್ಲಿಲ್ಲ. ಮಳೆ ತುಂಬಾ ಜೋರಾಗಿತ್ತು. ಭವಿಷ್ಯದ ಬಗ್ಗೆ ಈಗ ಯಾಕೆ ಯೋಚನೆ ಹೋಗಲೋ ಅಂದರು. ಅಜ್ಜ ಕರಪತ್ರ ಹಂಚಿದ. ಮಾಧ್ಯಮಗಳ ಮೂಲಕ ಮಾತನಾಡಿದ, ಕಷ್ಟವನ್ನು ಕಣ್ಣಿನ ಮುಂದೆ ಕಟ್ಟುವ ಹಾಗೆ ವಿವರಿಸಿ ಹೇಳಿದರೂ ಕೂಡ ಒಬ್ಬರು ಕೇಳಲಿಲ್ಲ. ಹಾಗೆ ಕಾಲಗಳು ಉರುಳಿದ ಹಾಗೆ ಅಜ್ಜನ ಮಾತು ನಿಂತಿತು. ಮಳೆ ಊರು ಬಿಟ್ಟು ದೂರ ಹೋಯಿತು. ನೀರು ಹೊಸ ವಿಳಾಸವನ್ನರಸುತ್ತಾ ಮಾಯವಾಯಿತು. ಈಗ ಹನಿ ನೀರನ್ನ ಹುಡುಕುತ್ತಾ ಊರ ಜನ ಹೊರಟಿದ್ದಾರೆ. ಕಂಡ ಕಂಡವರಲ್ಲಿ ಕೈ ಮುಗಿದು ಬೇಡುತ್ತಿದ್ದಾರೆ. ಮತ್ತೊಮ್ಮೆ ತಮ್ಮ ಹಳ್ಳಿಗಳ ಬದುಕಿನ ಕಡೆಗೆ ಸಾಗುವ ಯೋಚನೆ ಮಾಡುತ್ತಿದ್ದಾರೆ.ಈಗ ಅಜ್ಜನನ್ನ ಹುಡುಕುತ್ತಿದ್ದಾರೆ ಅಜ್ಜನ ಮಾತು ಹೌದೆಂದುಕೊಳ್ಳುತ್ತಿದ್ದಾರೆ. ಆದರೆ ಅಜ್ಜ ಈಗ ಮಾತನಾಡುವುದನ್ನು ಬಿಟ್ಟಿದ್ದಾನೆ. ಮೌನವಾಗಿದ್ದಾನೆ ಮಾಡಿದನ್ನ ಅನುಭವಿಸುವುದೊಂದೇ ಉಳಿದಿರುವ ಮಾರ್ಗ ಎಂದುಕೊಂಡಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ