ಸ್ಟೇಟಸ್ ಕತೆಗಳು (ಭಾಗ ೯೧೨)- ಉಳಿದ ಕತೆ

ಸ್ಟೇಟಸ್ ಕತೆಗಳು (ಭಾಗ ೯೧೨)- ಉಳಿದ ಕತೆ

ಸುಮ್ಮನೆ ಕುಳಿತಾಗ ಕೆದಕುವ ಕೆಲಸ ಬೇಡ, ಹೇಳದೆ ಉಳಿಯುವ ಹಲವು ಕಥೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಎಲ್ಲವನ್ನು ಹೇಳುವುದಕ್ಕಾಗುವುದಿಲ್ಲ. ಕೆಲವನ್ನ ಒಳಗಿದ್ದು ಅನುಭವಿಸಿ ಬದುಕುತ್ತಿರಬೇಕು,ಯಾರೋ ಹೇಳದ ಕಥೆಯನ್ನ ಸೃಷ್ಟಿಸಿಕೊಂಡು ಉಳಿದವರ ಮುಂದೆ ಅವರ ಕಥೆಗೆ ಕೆಟ್ಟ ಅರ್ಥವನ್ನು ನೀಡಬೇಡ, ಕಥೆಯ ಒಂದು ಭಾಗವನ್ನು ಮಾತ್ರ ತಿಳಿದುಕೊಂಡು ಇಡೀ ಕಥೆಯನ್ನು ನೀನೇ ನಿರ್ಧಾರವನ್ನ ಮಾಡಬೇಡ, ಪ್ರತಿಯೊಬ್ಬ ವ್ಯಕ್ತಿ ಹೇಳಿದ ಕಥೆಯಲ್ಲಿ ಹೇಳದೆ ಉಳಿದ ಒಂದಷ್ಟು ಭಾಗಗಳು ಹಾಗೆ ಇರುತ್ತವೆ. ಮುಜುಗರವೋ ಅನಿವಾರ್ಯತೆಯೋ ಯಾವುದೋ ಒಂದು ಕಾರಣಕ್ಕೆ ಆ ಕಥೆ ಒಳಗೆ ಉಳಿದುಬಿಟ್ಟಿರುತ್ತದೆ. ಅದನ್ನ ಕೆದಕುವ ಕೆಲಸ ಮಾಡಬೇಡ ನಿನಗೆ ಗೊತ್ತಿರುವ ಅಷ್ಟರಲ್ಲಿ ಖುಷಿಯಿಂದ ಇರು.  ಹೇಳದೆ ಉಳಿದ ನಿನ್ನ ಕಥೆಯೂ ಇದೆ ಅಲ್ವಾ? ಹಾಗಾಗಿ ಕೆದಕಬೇಡ. ಅವತ್ತು ನನ್ನ ಪಕ್ಕ ಕುಳಿತು ಚಿದಂಬರ ಹೇಳಿದ ಈ ಮಾತುಗಳು ಇವತ್ತಿಗೂ ಮನಸ್ಸಿನೊಳಗೆ ಜಾಗೃತವಾಗಿದೆ. ಹಾಗಾಗಿ ಕೆದಕುವ ಕೆಲಸವನ್ನು ಬಿಟ್ಟಿದ್ದೇನೆ. ಇವತ್ತು ಯಾಕೋ ನೆನಪಾಯ್ತು ಹಂಚಿಕೊಳ್ಳೋಣ ಅಂತ ಅನ್ನಿಸ್ತು ಅದಕ್ಕಾಗಿ ನಿಮಗೆ ತಿಳಿಸಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ