ಸ್ಟೇಟಸ್ ಕತೆಗಳು (ಭಾಗ ೯೧೩)- ವಾಸ

ಸ್ಟೇಟಸ್ ಕತೆಗಳು (ಭಾಗ ೯೧೩)- ವಾಸ

ಮನೇಲಿ ಕುಳಿತಾಗ ಅಜ್ಜ ಹೇಳ್ತಾ ಇದ್ರು, ಜೀವನದಲ್ಲಿ ಒಮ್ಮೆಯಾದರೂ ವನವಾಸ, ಅಜ್ಞಾತವಾಸವನ್ನು ಅನುಭವಿಸಬೇಕು ಅಂತ. ನಾನು ಕೇಳಿದೆ ಯಾಕೆ ನಾವು ಬದುಕ್ತಾ ಇರೋ ರೀತಿ ಸರಿ ಇಲ್ವಾ? ಚೆನ್ನಾಗಿದೆ ತಾನೆ ಇಲ್ಲಿ ನಾವು ವನವಾಸ ಅಜ್ಞಾತವಾಸವನ್ನ ಅನುಭವಿಸುವ ಅವಶ್ಯಕತೆ ಏನಿದೆ? ಅಂತ. ಅದಕ್ಕೆ ಅಜ್ಜ ಹೇಳಿದರು, ವನವಾಸ ಹೋದಾಗ ಅಪರಿಚಿತ  ಜಾಗಕ್ಕೆ ಹೋಗ್ತೀಯಾ, ಪರಿಚಯ ಇಲ್ಲದವರು ಸಿಕ್ತಾರೆ, ಯಾರನ್ನ ಪರಿಚಯ ಮಾಡ್ಕೋಬೇಕು, ನಿನ್ನ ಅಗತ್ಯಕ್ಕೆ ಯಾರೆಲ್ಲ ಸುತ್ತಮುತ್ತ ನಿಲ್ತಾರೆ, ನಿನ್ನ ನಿಜವಾದ ಶಕ್ತಿ ಏನು? ನಿನ್ನ ಬದುಕಿಗೆ ಅಗತ್ಯ ಯಾವುದು? ಯಾವುದೆಲ್ಲ ಸಮಸ್ಯೆಗಳಿಗೆ ನೀನು ಆ ಕ್ಷಣದಲ್ಲಿ ಯಾವ ರೀತಿಯಲ್ಲಿ ಸ್ಪಂದಿಸಬೇಕು? ಇದೆಲ್ಲವೂ ವನವಾಸಕ್ಕೆ ಹೋದಾಗ ಮಾತ್ರ ಅರ್ಥ ಆಗುತ್ತೆ. ಅಜ್ಞಾತವಾಸವಾದಾಗ ನಿನ್ನ ಸುತ್ತಮುತ್ತಲಿನ ಪರಿಚಯಸ್ಥರೆ ನಿನ್ನ ಪರಿಚಯವನ್ನು ಕಂಡುಹಿಡಿಯದಿದ್ದಾಗ ಅವರು ನಿನ್ನ ಬಗ್ಗೆ ಏನು ಮಾತನಾಡುತ್ತಾರೆ, ನಿನ್ನ ಬಗ್ಗೆ ನಿಜವಾಗಿ ಸಮಾಜ ಏನು ಹೇಳುತ್ತೆ, ಸುತ್ತಮುತ್ತಲಿನವರೆಗೆ ನಿನ್ನ ಬಗ್ಗೆ ಏನು ಅಭಿಪ್ರಾಯ ಇದೆ, ನೀನು ಕಳೆದುಕೊಂಡಿರುವುದೇನು ಪಡೆದುಕೊಳ್ಳಬೇಕಾಗಿರುವುದು ಏನು? ನಿನಗೋಸ್ಕರ ಮತ್ತು ಸಮಾಜ ಗೋಸ್ಕರ ನೀಡಬೇಕಾಗಿರುವುದೇನು ಎನ್ನುವುದು ಅರ್ಥ ಆಗುತ್ತೆ .ಹಾಗಾಗಿ ಒಂದು ಸಲ ಅನುಭವಿಸು ಅಜ್ಞಾತವಾಸ ಮತ್ತು ವನವಾಸವನ್ನು. ದಿನ ಹುಡುಕುತ್ತಾ ಇದ್ದೇನೆ ಎಂದಿನಿಂದ ಆರಂಭಿಸಲಿ ಅಜ್ಞಾತವಾಸ ಮತ್ತು ವನವಾಸವನ್ನ ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ