ಸ್ಟೇಟಸ್ ಕತೆಗಳು (ಭಾಗ ೯೧೭)- ನೇಮಕ

ಸ್ಟೇಟಸ್ ಕತೆಗಳು (ಭಾಗ ೯೧೭)- ನೇಮಕ

ನನ್ನಪ್ಪ ಪ್ರತೀ ದಿನ ಕೂಲಿ ಕೆಲಸಕ್ಕೆ ಹೋಗಿ ಬಂದು ಆ ದಿನ ತುಂಬಾ ಕೊಳೆಯಾದ ಬಟ್ಟೆಯನ್ನ ಕಲ್ಲಿನ ಮೇಲೆ ಹಾಕಿರುತ್ತಾರೆ. ಆ ಬಟ್ಟೆಯನ್ನು ಅಮ್ಮ ಒಗೆಯದೆ ಇದ್ದರೆ ಅಪ್ಪನಿಗೆ ಮರುದಿನ ಅದನ್ನು ಧರಿಸುವುದಕ್ಕೆ ಆಗುವುದಿಲ್ಲ. ತುಂಬಾ ಪ್ರೀತಿಯಿಂದ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಇದನ್ನು ಗಮನಿಸಿದಾಗ ನನಗನಿಸಿದ್ದು, ನಮ್ಮೆಲ್ಲರ ಮನಸ್ಸಿನ ಒಳಗೂ ಒಂದಿಷ್ಟು ಕೊಳಕಾದ ಯೋಚನೆಗಳು ಇರುತ್ತವೆ. ನಾವು ಒಂದು ದಿನವೂ ಅದನ್ನು ಸ್ವಚ್ಛ ಮಾಡುವ ಕಡೆಗೆ ಯೋಚನೆಯನ್ನು ಮಾಡಿಲ್ಲ. ಹೀಗಿರುವಾಗ ಮನಸ್ಸು ಜೊತೆ ಬದುಕುವುದು ಒಂಥರಾ ಗಲೀಜು ಅನ್ನಿಸಿರಲಿಕ್ಕಿಲ್ವಾ? ಕೆಟ್ಟ ಯೋಚನೆ, ಕೆಟ್ಟ ಕೆಲಸ, ದ್ವೇಷ, ಅಸೂಯೆ, ಅಸಹ್ಯ ಇವುಗಳಿಂದ ಸದಾ ತುಂಬಿರುವ ಮನಸ್ಸು ಹೀಗೆ ಗಲೀಜಾಗುತ್ತಾ ಹೋದ ಹಾಗೆ ಅದು ಶುಭ್ರವಾವಾಗುವುದು ಯಾವಾಗ? ಹಾಗಾಗಿ ಮನಸ್ಸು ತೊಳೆಯುವವರನ್ನು ಸದ್ಯದಲ್ಲಿ ನೇಮಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೋ ಏನೋ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ