ಸ್ಟೇಟಸ್ ಕತೆಗಳು (ಭಾಗ ೯೨೨)- ಕತ್ತಲೆ ಬೆಳಕು

ಸ್ಟೇಟಸ್ ಕತೆಗಳು (ಭಾಗ ೯೨೨)- ಕತ್ತಲೆ ಬೆಳಕು

ನಾನು ಎಷ್ಟು ಸಾಮರ್ಥ್ಯಗಳನ್ನು ನನ್ನೊಳಗೆ ತುಂಬಿಸಿಕೊಳ್ಳಬೇಕು, ಯಾವ ಯಾವ ಸಾಮರ್ಥ್ಯಗಳು ನನ್ನೊಳಗೆ ಗಟ್ಟಿಯಾಗಿ ಸ್ಥಿರವಾಗಿರಬೇಕು, ಇದನ್ನ ನಾನು ಹೇಗೆ ಅರ್ಥ ಮಾಡಿಕೊಳ್ಳುವುದು ಒಂದು ಗೊತ್ತಾಗ್ತಾ ಇಲ್ಲ. ಈ ಪ್ರಶ್ನೆಗೆ ಉತ್ತರ ಬೇಕಿತ್ತು.ಕಾರಣ ಮುಂದೆ ಒಂದಷ್ಟು ಸಮಸ್ಯೆಗಳು ಖಂಡಿತ ಇದರಾಗುತ್ತವೆ. ಆಗ ನಿಂತು ಯೋಚಿಸುವುದಕ್ಕಿಂತ ಈಗ ಅದಕ್ಕೆ ತಕ್ಕದಾದ ಸಾಮರ್ಥ್ಯವನ್ನು ವೃದ್ಧಿಸಿಕೊಂಡರೆ ನನ್ನ ಜೀವನಕ್ಕೆ ಒಳ್ಳೆಯದಾಗುವುದು ಅಲ್ವಾ? ತಿಳಿದವರ ಹತ್ತಿರ ಹೀಗೆ ಪ್ರಶ್ನೆ ಮಾಡಿದಾಗ ಅವರು ಹೇಳಿದ ಉತ್ತರ ತುಂಬಾ ಮಾರ್ಮಿಕವಾಗಿತ್ತು. ಕತ್ತಲು ಹೆಚ್ಚಾದ ಹಾಗೆ ಬೆಳಕಿಗೆ ಮೌಲ್ಯ ತುಂಬುತ್ತಾ ಹೋಗುತ್ತೆ. ಕತ್ತಲೆಯ ಸಣ್ಣ ಕೋಣೆಗೆ ನಿನ್ನ ಕೈಯಲ್ಲಿರುವ ಸಣ್ಣ ಬೆಳಕು ಸಾಕಾಗುತ್ತದೆ. ಆದರೆ ಕತ್ತಲೆ ವಿಶಾಲ ಜಾಗದಲ್ಲಿ ತುಂಬಿಕೊಂಡ ಹಾಗೆ ನಿನ್ನ ಬೆಳಕು ಇಡೀ ಪ್ರದೇಶವನ್ನ ಬೆಳಗಿಸದಿದ್ದರೂ ನಿನ್ನ ಹೆಜ್ಜೆ ಇಡುವುದಕ್ಕೆ ಸಾಧ್ಯವಾಗುವಷ್ಟು ಬೆಳಕು ನಿನ್ನ ಬಳಿ ಇರುತ್ತದೆ ಅಂದುಕೊಳ್ಳುತ್ತೇನೆ. ವಿಶಾಲವಾದ ಕತ್ತಲೆಯ ಜಾಗವನ್ನು ಬೆಳಕು ಆವರಿಸಿಕೊಳ್ಳಬೇಕು ಅಂದರೆ ಆ  ಕತ್ತಲೆಯನ್ನು ತುಂಬುವಂತಹ ಬೆಳಕಿನ ವ್ಯವಸ್ಥೆ ನಿನ್ನಲ್ಲಿರಬೇಕು. ಹಾಗೆಯೇ ಸಮಸ್ಯೆ ಯಾವತರನಾದದ್ದು ಎಷ್ಟು ದೊಡ್ಡದಾದದ್ದು ಅನ್ನೋದರ ಮೇಲೆ ನಿನ್ನೊಳಗಿನ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾಗುತ್ತದೆ. ಕತ್ತಲಿನ ತೀವ್ರತೆಗೆ ಬೆಳಕಿನ ಮೌಲ್ಯ ಹೆಚ್ಚು ಕಾಣುವ ಹಾಗೆ ಸಮಸ್ಯೆಯ ತೀವ್ರತೆಗೆ ನಿನ್ನಲ್ಲಿರುವ ಪ್ರತಿಭೆ ಸಾಣೆಗೆ ಒಡ್ಡುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ