ಸ್ಟೇಟಸ್ ಕತೆಗಳು (ಭಾಗ ೯೨೭)- ಬಿಸಿಲು
ನನ್ನ ಬಳಿ ವಿಳಾಸವು ಇಲ್ಲ, ಮೊಬೈಲ್ ಸಂಖ್ಯೆಯೂ ಇಲ್ಲ. ಇಲ್ಲವಾದರೆ ಖಂಡಿತ ಒಂದು ಪತ್ರವಾದರೂ ಬರೆತಿದ್ದೆ, ಮೊಬೈಲಲ್ಲಿ ಕರೆ ಮಾಡಿ ಆದ್ರೂ ತಿಳಿಸುತ್ತಿದ್ದೆ. ಸಮಸ್ಯೆ ಎಲ್ಲಿಂದ ಆರಂಭವಾಗಿದೆ ಯಾರಿಂದ ಆರಂಭವಾಗಿದೆ ಅವರಿಗೆ ತಿಳಿಸಿದರೆ ಅವರೊಂದು ಪರಿಹಾರವನ್ನು ಸೂಚಿಸ್ತಾರೆ. ಹಾಗಾದಾಗ ಕಷ್ಟ ಅನುಭವಿಸುವ ಎಲ್ಲರೂ ಕೂಡ ನೆಮ್ಮದಿಯಲ್ಲಿ ಬದುಕುವುದಕ್ಕಾದರೂ ಸಾಧ್ಯವಾಗುತ್ತದೆ ಹಾಗಾಗಿ ನಾನು ನಿರ್ಧಾರ ಮಾಡಿದ್ದೇನೆ ನನಗೆಂದೂ ಅಲ್ಲಿಗೆ ಹೋಗಿ ತಲುಪುವುದಕ್ಕೆ ಸಾಧ್ಯನೇ ಇಲ್ಲ ದಾರಿ ಸರಿ ಇಲ್ಲ ಅಂತಲ್ಲಾ, ಅಷ್ಟು ಹತ್ತಿರದಲ್ಲಿ ನಿಂತು ಮಾತನಾಡುವ ಸಾಮರ್ಥ್ಯವು ನನ್ನಲ್ಲಿಲ್ಲ. ಹೀಗಿರುವಾಗ ಕರೆ ಮಾಡಿ ಮಾತನಾಡಬೇಕು ಅಂತ ಅಂದ್ರೆ ಅಲ್ಲಿಯ ಮೊಬೈಲ್ ಸಂಖ್ಯೆ ಏನು ಅನ್ನೋದು ಗೊತ್ತಿಲ್ಲ. ಒಂದು ಪತ್ರವನ್ನು ಬರೆಯೋಣ ಅಂತಂದ್ರೆ ವಿಳಾಸವು ತಿಳಿದಿಲ್ಲ. ಅವನು ಬೆಳಗ್ಗೆ ಒಂದು ಕಡೆ ಮಧ್ಯಾಹ್ನ ಒಂದು ಕಡೆ ರಾತ್ರಿ ಇನ್ನೊಂದು ಕಡೆ ಹೀಗಿರುವಾಗ ಏನು ಮಾಡೋದು ಅಂತ ಗೊತ್ತಾಗದೆ ನಿಮ್ಮ ಮುಂದೆ ಬಂದಿದ್ದೇನೆ . ನಿಮಗೂ ಸಮಸ್ಯೆ ಆಗಿದೆ ಅಂದುಕೊಳ್ಳುತ್ತೇನೆ ಈ ಸೂರ್ಯ ಇದ್ದಾನಲ್ಲ ಆತನದು ಬಿಸಿಲು ತುಂಬಾ ಜಾಸ್ತಿ ಮಾರ್ರೆ, ಇಷ್ಟು ಬಿಸಿಲಾಗುತ್ತ ಹೋದ ಹಾಗೆ ನಾವು ಬದುಕೋದು ಹೇಗೆ ? ಟೆಂಪರೇಚರ್ ಒಂಚೂರು ಕಡಿಮೆ ಮಾಡಿಕೊಳ್ಳಿ. ಕಳೆದುಕೊಳ್ಳುವುದಕ್ಕೆ ಏನು ಇಲ್ಲ .ಬಿಸಿಲಿದೆ ಹೊರಬರುವುದಕ್ಕಾಗೋದಿಲ್ಲ ಅನ್ನುವವರು ಹೊರಗೆ ಬರಬಹುದು, ದುಡಿಯೋದಕ್ಕೆ ಕಷ್ಟಪಡುವವರು ದುಡಿಬಹುದು, ಇದೆಲ್ಲ ಬರೆದಿದ್ದಾಗಿದೆ ಅಲ್ಲಿಗೆ ಕಳುಹಿಸುವುದಕ್ಕೆ ವಿಳಾಸ ಗೊತ್ತಿಲ್ಲ .ನಿಮಗೆ ಗೊತ್ತಿದ್ದರೆ ಕಳುಹಿಸಿಕೊಡಿ. ನಾನು ಆ ಪತ್ರವನ್ನು ಸೂರ್ಯನಿಗೆ ತಲುಪಿಸುತ್ತೇನೆ. ವಿಳಾಸವಿಲ್ಲವಾದರೆ ಮೊಬೈಲ್ ಸಂಖ್ಯೆ ಕೊಟ್ಟರೂ ಅವನಿಗೆ ಕರೆ ಮಾಡಿ ತಿಳಿಸುತ್ತೇನೆ. ಸಮಸ್ಯೆ ಪರಿಹಾರ ಆಗಲೇಬೇಕು ನನ್ನಿಂದ ಸಾಧ್ಯವಾಗದಿದ್ದರೆ ನೀವ್ಯಾರಾದರೂ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ, ಈ ಬಿಸಿಲಿಗೆ ಹೊರಗಡೆ ಹೋಗುವುದಕ್ಕೆ ಆಗುವುದಿಲ್ಲ ಸ್ವಾಮಿ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ