ಸ್ಟೇಟಸ್ ಕತೆಗಳು (ಭಾಗ ೯೨೯)- ಕಾಡು
ದಿನಂಪ್ರತಿಯಂತೆಯೇ ಬದುಕಿದ್ದವನಿಗೆ ಆ ದಿನದ ಕಾಡಿನ ನಡುವಿನ ಪರಿಚಯವಿಲ್ಲದ ಹೂವೊಂದರ ಕಂಡಾಗ ತನ್ನ ಬದುಕಿನ ರೀತಿ ಬದಲಾಗಬೇಕು ಅನ್ನಿಸ್ತು. ಹಾಗೆ ಎಲ್ಲರಿಗೂ ಅನ್ನಿಸಿವುದಿಲ್ಲವಂತೆ, ಅವನಿಗೆ ಹಾಗೆ ಅನ್ನಿಸುವುದ್ದಕ್ಕೆ ಅವನ ಜೀವನದಲ್ಲೇನೂ ಅಂಥಹಾ ಅದ್ಭತ ಘಟನೆಗಳೇನೂ ಘಟಿಸಿಲ್ಲ. ಆದರೂ ಆತನೊಳಗೆ ಬದಲಾವಣೆಗೆ ಮನಸ್ಸು ಒಗ್ಗಿಕೊಂಡಿದೆ. ಹಾಗೆ ದಾರಿಯಲ್ಲಿ ಸಾಗುತ್ತಿದ್ದವನಿಗೆ ಪರಿಮಳವೊಂದು ಸೆಳೆಯಿತು. ಸುತ್ತ ಮುತ್ತ ಕಣ್ಣು ಹಾಯಿಸಿದಾಗ ಕಂಡದ್ದೇ ಕಾಡಿನ ಹೂವು. ಮತ್ತೆ ಮತ್ತೆ ಗಮಿನಿಸಿದಾಗ ಆ ಹೂವನ್ನ ಆತ ಕಂಡದ್ದೇ ಇಲ್ಲ. ಮನಸ್ಸು ಜಾಗೃತವಾಯಿತು. ಈ ಕಾಡೊಳಗೆ ಜಗತ್ತಿಗೆ ಇನ್ನೂ ಪರಿಚಯವಾಗದ ಹಲವಾರು ವೈಚಿತ್ರಗಳು ಅಡಗಿದೆ, ಹೂವು, ಗಿಡ, ಬಳ್ಳಿ, ಹಣ್ಣು, ಕಾಯಿ. ಅವೆಲ್ಲವೂ ಜಗತ್ತಿಗೆ ತಮ್ಮ ಪರಿಚಯವಾಗಬೇಕೆಂದು ಬಯಸಿಲ್ಲ. ತಮ್ಮ ಸತ್ವವನ್ನು ಮರೆತಿಲ್ಲ. ತಾವು ಅರಳುವುದನ್ನ, ಸುವಾಸನೆಯನ್ನ, ಎಲ್ಲೂ ಕಡಿಮೆ ಮಾಡಿಲ್ಲ. ಬೇಕಾದ್ದನ್ನ ಪಡೆದು ತಾವು ನೆಮ್ಮದಿಯಲ್ಲಿವೆ ಹೆಸರಿಲ್ಲದ ಜೀವಗಳು. ಹಾಗೆ ನಾನ್ಯಾಕಾಗಬಾರದು. ಹೆಸರಿನ ಜಂಜಾಟವೇಕೆ. ಪರರ ಗಮನಕ್ಕಾಗಿ ನನ್ನೊಳಗೆ ಬದಲಾವಣೆಗಳೇಕೆ. ಎಂದೂ ಹೀಗೆ ಇರೋಣ. ಒಳಗೂ, ಹೊರಗೂ, ಏಕಾಂತವೂ ಬಹುತ್ವವೂ ನಾನಗಿರೋಣ... ಮತ್ತೆ ಕಾಡೊಳಗೆ ನಡೆದು ಬಿಟ್ಟ ಇನ್ನೊಂದಷ್ಟು ಆಳ ಚಿಂತನೆಗೆ.. ಕಾಡು ಗಮನಿಸಿದರೆ ಕಾಡುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ