ಸ್ಟೇಟಸ್ ಕತೆಗಳು (ಭಾಗ ೯೩೯)- ಮಾತು

ಸ್ಟೇಟಸ್ ಕತೆಗಳು (ಭಾಗ ೯೩೯)- ಮಾತು

ನಮಗಿನ್ನೂ ಅರ್ಥ ಅಗ್ತಿಲ್ಲ. ಭಗವಂತ ಸಕಲವನ್ನು ನಿರ್ಣಯ ಮಾಡಿದ್ದಾನೆ. ನಾವು ಮದ್ಯದಲ್ಲೇ ಏನೇನೊ ಡೊಂಬರಾಟ ಆಡುತ್ತೇವೆ. ನಾವೇ ಗಾಡಿ ನಡೆಸುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಭಗವಂತನ ನಿರ್ಣಯದ ಮುಂದೆ ನಮ್ಮದೇನೂ ನಡೆಯುವುದಿಲ್ಲ. ಅವನಿಗೆ ಮಲಗಿದ ತಕ್ಷಣ ನಿದ್ದೆ. ಮದ್ಯದಲ್ಲಿ ಎಚ್ಚರ ಸಾಧ್ಯವೇ ಇಲ್ಲ. ಆದರೆ ಆ ದಿನ ನಿದ್ದೇನೇ ಬರದೆ ಒದ್ದಾಡುತ್ತಿದ್ದಾನೆ. ಆಗ ಬಾಗಿಲ ಹೊರಗಿಂದ ಕರೆ ಬಂತು . ತುರ್ತು ಆರೋಗ್ಯ ಪರಿಸ್ಥಿತಿ ಗೆ ವ್ಯಕ್ತಿಯೊಬ್ಬರನ್ನ ಆಸ್ಪತ್ರಗೆ ಸಾಗಿಸಬೇಕೂ ಅಂತ. ಆತ ಹೊರಟು ಬಿಟ್ಟ. ಇನ್ನೊಬ್ಬನಿಗೆ ಪ್ರತೀ ದಿನ ಹೊರಡುವ ಬಸ್ಸು ಸಿಗಲೇ ಇಲ್ಲ . ಆ ದಿನ ದುರದೃಷ್ಟ ನೆನೆಯುತ್ತಾ ನಿಂತಿರುವಾಗ ಬಂದು ಕಣ್ಣೆದುರು ನಿಂತ ಕಾರು ಆತನಿಗೆ ಜೀವನ ಸಂಗಾತಿಯನ್ನ ನೀಡಿತು. ತುರ್ತು ಪರಿಸ್ಥಿತಿಗೆ ಬೇಕಾಗಿದ್ದ ಹಣ ಹೊಂದಾಣಿಕೆ ಆಗದೆ ಆಳುತ್ತಿದ್ದ, ಹಳೆಯ ಗೆಳೆಯನೊಬ್ಬ ಊರಿಗೆ ಬಂದು ಬಾಕಿ ಸಾಲ ತೀರಿಸಿದ. ಹೀಗೆ ಘಟನೆಗಳು ಎಲ್ಲರ ಜೀವನದಲ್ಲಿ ಜರಗುತ್ತವೆ. ನಾವು ಗಮನಿಸುವುದಿಲ್ಲವಷ್ಟೆ. ನಿಮ್ಮ ಜೀವನದ ಪುಟಗಳನ್ನ ಭಗವಂತ ನಿರ್ದೇಶಿಸಿದ್ದಾನೆ. ನೀನು ಅಭಿನಯಿಸಬೇಕು ಅಷ್ಟೆ. ಆಗುವುದೆಲ್ಲವೂ ಒಳ್ಳೆಯದ್ದಕ್ಕೆ ಅಂತ ಅಂದುಕೊಂಡು ನಡಿಬೇಕಷ್ಟೆ. 

ಪ್ರತೀ ಸಲವೂ ಎದುರಾದಾಗ ಶಾಲಾ ಮೇಷ್ಟ್ರು ಶಿವರಾಮ ಶಾಸ್ತ್ರಿಗಳು ಹೇಳುತ್ತಿದ್ದ ಮಾತುಗಳು. ಇಂದು ಕೂಡಾ ಆದೇ ಉದಾಹರಣೆಯೊಂದಿಗೆ ಮಾತು ಮುಗಿಸಿ, ಇಂದಿನವರೆಗೂ ಅವರು ಹೇಳಿದ ಮಾತನ್ನು ಪಾಲಿಸದೇ ಇದ್ದದ್ದಕ್ಕೆ ಕೋಪಿಸಿಕೊಂಡು ಹೊರಟು ಬಿಟ್ಟರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ