ಸ್ಟೇಟಸ್ ಕತೆಗಳು (ಭಾಗ ೯೪೦)- ಗುರಿ

ಸ್ಟೇಟಸ್ ಕತೆಗಳು (ಭಾಗ ೯೪೦)- ಗುರಿ

ನೀನ್ಯಾಕೆ ಹೆಜ್ಜೆ ಮುಂದೆ ಇಡ್ತಾ ಇಲ್ಲ. ಅಲ್ಲೇ ನಿಂತುಬಿಟ್ಟಿದ್ದೀಯಾ?, ಊರು ತಲುಪಬೇಕಾದ ಯೋಚನೆ ಏನು ಇಲ್ವಾ? ಯೋಚನೆಯೇನೋ ಇದೆ, ಆದರೆ ಇಷ್ಟು ಸಣ್ಣ ಹುಡುಗನ ನಾನು ಹೇಗೆ ನಂಬೋದು, ಅವನಿಗೆ ಏನು ಗೊತ್ತಿದೆ ಅಂತ ನಾನು ಮುಂದುವರೆಯಲಿ. ನನಗಂತೂ ಅವನ ಮೇಲೆ ನಂಬಿಕೆ ಇಲ್ಲ." ಸರಿ ಮಾರಾಯ ಈ ಹುಡುಗನ ಮೇಲೆ ನಂಬಿಕೆ ಇಲ್ಲ ಅವರಾದರೂ ಕರ್ಕೊಂಡು ಹೋಗ್ತಾರೆ ಅವರ ಜೊತೆಗಾದರೂ ಹೆಜ್ಜೆ ಹಾಕು." "

"ಅವರಿಗೆ ನಾಲ್ಕು ಹೆಜ್ಜೆ ಇಡೋದೇ ಕಷ್ಟ ಇನ್ನು ಊರಿನವರೆಗೆ ಅವರು ಹೇಗೆ ತಲುಪುತ್ತಾರೆ ಅವರಿಂದಲೂ ಸಾಧ್ಯವಾಗಲಿಕ್ಕಿಲ್ಲ"

" ಅಲ್ಲೋ ಮಾರಾಯ ನಿನಗೀಗ ಊರು ತಲುಪಬೇಕೋ ಬೇಡವಾ? ನಿನಗೆ ನಿನ್ನ ಊರನ್ನ ತಲುಪಬೇಕು ಅಂತಿದ್ರೆ ಯಾರಿಗೆ ಆ ಊರಿನ ಬಗ್ಗೆ ದಾರಿ  ಗೊತ್ತಿದೆಯೋ ಅವರು ಹೇಳಿದ ದಾರಿಯಲ್ಲಿ ಸಾಗುವುದು ಒಳ್ಳೆಯದು ತಾನೆ. ಅದು ಬಿಟ್ಟು ನೀನೆ ದಾರಿಯನ್ನು ಹುಡುಕಿ ಹೊರಡುತ್ತೇನೆ ಎಂದರೆ ಅಷ್ಟು ಬೇಗ ತಲುಪುವುದಕ್ಕೆ ಸಾಧ್ಯವಾಗಲಿಕ್ಕಿಲ್ಲ. ಹಾಗಾಗಿ  ನಿನ್ನ ಗುರಿಯ ಊರನ್ನು ತಲುಪಬೇಕು ಅನ್ನುವಾಗ ದಾರಿ ತೋರಿಸುವವರು ದೊಡ್ಡವರು ಸಣ್ಣವರು ಬೇಧಭಾವ ಬೇಡ. ಅವನಿಗೆ ದಾರಿ ಗೊತ್ತಿದ್ರೆ ಅವನನ್ನ ಕಣ್ಣು ಮುಚ್ಚಿ ಹಿಂಬಾಲಿಸಬಹುದು. ಇಲ್ದಿದ್ರೆ ನೀನು ಊರು ತಲುಪುವ ಯಾವ ಲಕ್ಷಣನೂ ನನಗೆ ಕಾಣುತ್ತಿಲ್ಲ."

ನಿನ್ನೆ ಸುಮ್ಮನೆ ಕೂತಿದ್ದಾಗ ನಮ್ಮಪ್ಪ ಬೈದ ಮಾತುಗಳು ಮತ್ತೆ ನೆನಪಿಸಿ ಒಂದಷ್ಟು ನಿರ್ಧಾರವನ್ನ ಗಟ್ಟಿ ಮಾಡೋದಿಕ್ಕೆ ಮನಸ್ಸು ಒಪ್ಪಿಕೊಳ್ಳುವುದಕ್ಕೆ ಆರಂಭ ಮಾಡಿದವು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ